ಸೋಮವಾರ, ಜನವರಿ 17, 2022
19 °C

ಚೀನಾದಿಂದ ಪಾಂಗಾಂಗ್‌ ಬದಿಯಲ್ಲಿ ಸೇತುವೆ: ಪ್ರಧಾನಿ ಏಕೆ ಮೌನವಾಗಿದ್ದಾರೆ–ರಾಹುಲ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪೂರ್ವ ಲಡಾಖ್‌ನ ಪಾಂಗಾಂಗ್‌ ಸರೋವರದ ಬದಿಯಲ್ಲಿ ಚೀನಾ ಸೇತುವೆ ನಿರ್ಮಿಸುತ್ತಿರುವುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಏಕೆ ಮೌನವಾಗಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಪ್ರಶ್ನಿಸಿದ್ದಾರೆ. 

‘ಕಿವುಡನ ಹಾಗೆ ಪ್ರಧಾನಿ ಮೌನವಾಗಿರುವುದು ಸರಿಯಲ್ಲ. ನಮ್ಮ ಭೂಮಿ, ಗಡಿಗಳ ವಾಸ್ತವ ಸ್ಥಿತಿಯ ಬಗ್ಗೆ ಜನರಿಗೆ ಗೊತ್ತಾಗಬೇಕು ಎಂದು ಅವರು ಟ್ವೀಟ್‌ ಮಾಡಿದ್ದಾರೆ. ಇದರೊಂದಿಗೆ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ಕಳೆದ ಎರಡು ತಿಂಗಳಿನಿಂದ ಚೀನಾ ಸೇತುವೆ ನಿರ್ಮಿಸುತ್ತಿದೆ ಎಂದು ಹೇಳುವ ಮಾದ್ಯಮ ವರದಿಯೊಂದನ್ನು ಹಂಚಿಕೊಂಡಿದ್ದಾರೆ. 

ಈ ಸೇತುವೆಯು ಸರೋವರದ ದಕ್ಷಿಣ ಮತ್ತು ಉತ್ತರ ದಡಗಳ ನಡುವೆ ಸಂಪರ್ಕ ಕಲ್ಪಿಸಲಿದೆ ಎಂದು ವರದಿ ಹೇಳಿದೆ. 

‘ಪ್ರಧಾನಿ ವಿವರಿಸಬೇಕು’(ಕೊಯಮತ್ತೂರು ವರದಿ): ಭಾರತ-ಚೀನಾ ಗಡಿಯಲ್ಲಿನ ಬೆಳವಣಿಗೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ವಿವರಿಸಬೇಕು. ಜತೆಗೆ, ಗಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಉಭಯ ರಾಷ್ಟ್ರಗಳು ಮಾತುಕತೆ ಮುಂದುವರಿಸಬೇಕು ಎಂದು ಸಿಪಿಐನ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಅವರು ಹೇಳಿದ್ದಾರೆ. 

ಪಾಂಗಾಂಗ್‌ ಸರೋವರದ ಬದಿಯಲ್ಲಿ ಚೀನಾದಿಂದ ಸೇತುವೆ ನಿರ್ಮಾಣದ ವರದಿ ಬಗ್ಗೆ ಪ್ರತಿಕ್ರಿಯಿಸಿದ ಅವರು,‘ ಗಡಿ ಸಮಸ್ಯೆಗೆ ಎರಡೂ ದೇಶಗಳು ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಮೋದಿ ಈ ಬಗ್ಗೆ ಏನೂ ಮಾತನಾಡುತ್ತಿಲ್ಲ. ಗಡಿ ಪರಿಸ್ಥಿತಿ ಬಗ್ಗೆ ಜನರಿಗೆ ತಿಳಿಸುವುದು ಅವರ ಕರ್ತವ್ಯವಾಗಿದೆ’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು