ಶುಕ್ರವಾರ, ಜೂನ್ 25, 2021
22 °C

ಕಣ್ಗಾವಲಿನಲ್ಲಿ ಪಶ್ಚಿಮ ಬಂಗಾಳದ ರಾಜಭವನ; ರಾಜ್ಯಪಾಲರ ಆರೋಪ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಪಶ್ಚಿಮ ಬಂಗಾಳದ ರಾಜಭವನವನ್ನು ಕಣ್ಗಾವಲಿನಲ್ಲಿ ಇರಿಸಲಾಗಿದ್ದು, ಈ ಕ್ರಮವು ಸಂಸ್ಥೆಯ ಪಾವಿತ್ರ್ಯವನ್ನೇ ಹಾಳು ಮಾಡುತ್ತಿದೆ ಎಂದು ರಾಜ್ಯಪಾಲ ಜಗದೀಪ್ ಧನಕರ್ ಆರೋಪಿಸಿದ್ದಾರೆ.

ವರ್ಷದಿಂದ ಹಲವು ವಿಷಯಗಳ ಬಗ್ಗೆ ಟಿಎಂಸಿ ಸರ್ಕಾರದೊಂದಿಗೆ ಹಲವು ಪ್ರಕರಣಗಳ ಕಾರಣಕ್ಕಾಗಿ ಸಂಘರ್ಷ ನಡೆಸುತ್ತಲೇ ಇರುವ ರಾಜ್ಯಪಾಲರು, ‘ಸರ್ಕಾರ ರಾಜಭವನವನ್ನು ಕಣ್ಗಾವಲಿನಲ್ಲಿಟ್ಟಿದ್ದು, ಇದರಿಂದ ರಾಜ್ಯದಲ್ಲಿ ಅರಾಜಕತೆ ಮುಂದುವರಿದಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

‘ರಾಜಭವನದ ಪಾವಿತ್ರ್ಯ ರಕ್ಷಣೆಗೆ ನಾನು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇನೆ’ ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು