ಶನಿವಾರ, ಜನವರಿ 23, 2021
28 °C

ರಾಜ್‌ ಕಮಲ್‌ಗೆ ರವೀಂದ್ರನಾಥ ಟ್ಯಾಗೋರ್‌ ಸಾಹಿತ್ಯ ಪ್ರಶಸ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪತ್ರಕರ್ತ ಮತ್ತು ಲೇಖಕ ರಾಜ್‌ ಕಮಲ್‌ ಝಾ ಅವರು ರವೀಂದ್ರನಾಥ ಟ್ಯಾಗೋರ್‌ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ರಾಜ್‌ ಕಮಲ್‌ ಅವರ ‘ದಿ ಸಿಟಿ ಅಂಡ್ ದಿ ಸೀ’ ಕಾದಂಬರಿಗೆ ಈ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿಯು ₹ 3.69 ಲಕ್ಷ ನಗದು ಮತ್ತು ರವೀಂದ್ರನಾಥ ಟ್ಯಾಗೋರ್‌ ಪ್ರತಿಮೆಯನ್ನು ಹೊಂದಿದೆ. ಈ ಕಾದಂಬರಿ ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಆಧಾರಿತವಾಗಿದೆ.

ಸಾಹಿತ್ಯ, ಮಾನವ ಹಕ್ಕು, ಶಿಕ್ಷಣ, ಕಲೆ ಮತ್ತು ವಿಶ್ವ ಶಾಂತಿಗೆ ಕೊಡುಗೆ ನೀಡಿದವರನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ಅಮೆರಿಕ ಮೂಲದ ಪ್ರಕಾಶಕ ಪೀಟರ್‌ ಬುಂಡಲೋ ಅವರು 2018ರಿಂದ ರವೀಂದ್ರನಾಥ ಟ್ಯಾಗೋರ್‌ ಸಾಹಿತ್ಯ ಪ್ರಶಸ್ತಿ ನೀಡುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು