ಬುಧವಾರ, ಜನವರಿ 27, 2021
21 °C

ಸಿಎಸ್‌ಡಿ ಕ್ಯಾಂಟಿನ್‌ನಿಂದ ಆನ್‌ಲೈನ್‌ ಮೂಲಕ ವಸ್ತು ಖರೀದಿಗೆ ಪೋರ್ಟಲ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕ್ಯಾಂಟಿನ್‌ ಸ್ಟೋರ್ಸ್‌ ಡಿಪಾರ್ಟ್‌ಮೆಂಟ್‌(ಸಿಎಸ್‌ಡಿ) ಮೂಲಕ ವಾಷಿಂಗ್‌ ಮೆಷಿನ್‌, ಟಿವಿ, ರೆಫ್ರಿಜರೇಟರ್‌, ಮೈಕ್ರೊವೇವ್‌ ಒವನ್‌ ಸೇರಿದಂತೆ ದುಬಾರಿ ಬೆಲೆಯ ವಸ್ತುಗಳನ್ನು ಆನ್‌ಲೈನ್‌ ಮೂಲಕವೇ ಖರೀದಿಸಲು ಅನುಕೂಲವಾಗುವಂತೆ ನೂತನ ಪೋರ್ಟಲ್‌ಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಶುಕ್ರವಾರ ಚಾಲನೆ ನೀಡಿದರು. 

‘ಮನೆಯಲ್ಲೇ ಕುಳಿತು ಎಎಫ್‌ಡಿ–1 ವಿಭಾಗದ ವಸ್ತುಗಳನ್ನು ಖರೀದಿಸಲು ಅಂದಾಜು 45 ಲಕ್ಷ ಸಿಎಸ್‌ಡಿ ಫಲಾನುಭವಿಗಳಿಗೆ ಈ ಪೋರ್ಟಲ್‌ ಸಹಕಾರಿಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಾದಿಸಿರುವ ಡಿಜಿಟಲ್‌ ಇಂಡಿಯಾಗೆ ಪೂರಕವಾಗಿ ಈ ಪೋರ್ಟಲ್‌ಗೆ ಚಾಲನೆ ನೀಡಲಾಗಿದೆ. ಶಸ್ತ್ರಪಡೆಯ ಎಲ್ಲ ಯೋಧರು ಹಾಗೂ ಅಧಿಕಾರಿಗಳ ಕ್ಷೇಮಾಭಿವೃದ್ಧಿಗೆ ಸರ್ಕಾರವು ಬದ್ಧವಾಗಿದೆ’ ಎಂದು ಟ್ವೀಟ್‌ ಮೂಲಕ ಸಿಂಗ್‌ ತಿಳಿಸಿದ್ದಾರೆ.

ಈ ವಿಭಾಗದಲ್ಲಿ ಮೇಲ್ಕಂಡ ವಸ್ತುಗಳ ಜೊತೆಗೆ ಏರ್‌ ಪ್ಯೂರಿಫೈಯರ್‌, ಡಿಶ್‌ ವಾಷರ್‌, ಹೋಂ ಥಿಯೇಟರ್‌, ಮೊಬೈಲ್‌ ಫೋನ್‌ ಮುಂತಾದ ವಸ್ತುಗಳಿವೆ. ಪ್ರಸ್ತುತ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಹಾಗೂ ನಿವೃತ್ತ ಸಿಬ್ಬಂದಿಯ ಅನುಕೂಲಕ್ಕಾಗಿ ಸಿಎಸ್‌ಡಿ ಕ್ಯಾಂಟಿನ್‌ ಕಾರ್ಯನಿರ್ವಹಿಸುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು