ನವದೆಹಲಿ: ‘ಮತದಾನದ ಹಕ್ಕನ್ನು ಜನರು ಗೌರವಿಸಬೇಕು. ವಿಶ್ವದಾದ್ಯಂತ ಈ ಹಕ್ಕಿಗಾಗಿ ಹಲವರು ಹೋರಾಡಿದ್ದಾರೆ’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸೋಮವಾರ ತಿಳಿಸಿದರು.

11ನೇ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಉದ್ಧೇಶಿಸಿ ಮಾತನಾಡಿದ ಅವರು, ‘ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಒಂದಾದ ಅಮೆರಿಕ, ಮತದಾನದ ಹಕ್ಕಿಗಾಗಿ ದಶಕಗಳ ಹೋರಾಟವನ್ನು ನಡೆಸಿದೆ’ ಎಂದರು.

‘ಬ್ರಿಟನ್‌ನಲ್ಲೂ ದೀರ್ಘ ಹೋರಾಟದ ಬಳಿಕ ಮಹಿಳೆಯರಿಗೆ ಮತದಾನದ ಹಕ್ಕು ಸಿಕ್ಕಿದೆ. ಸ್ವಾತಂತ್ರ್ಯದ ಮೊದಲು ಭಾರತದಲ್ಲೂ ಇದೇ ಪರಿಸ್ಥಿತಿ ಇತ್ತು. ಆದರೆ ಸ್ವಾತಂತ್ರ್ಯದ ಬಳಿಕ 21 ವರ್ಷದ ಎಲ್ಲಾ ವಯಸ್ಕರಿಗೂ ಮತದಾನ ಮಾಡುವ ಹಕ್ಕನ್ನು ನೀಡಲಾಯಿತು. ಬಳಿಕ ವಯೋಮಿತಿಯನ್ನು 18 ಕ್ಕೆ ಇಳಿಸಲಾಯಿತು’ ಎಂದು ಅವರು ಹೇಳಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಕೂಡ ಈ ಹಕ್ಕನ್ನು ಪ್ರಮುಖ ಹಕ್ಕೆಂದು ಪರಿಗಣಿಸಿದ್ದರು. ಹಾಗಾಗಿ ಯುವ ಜನತೆ ಮತ ಚಲಾಯಿಸಿ, ಇತರರಿಗೂ ಪ್ರೇರಣೆಯಾಗಬೇಕು ಎಂದು ಅವರು ಕೇಳಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.