ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತವನ್ನು ಇಡೀ ವಿಶ್ವಕ್ಕೆ ಮಾದರಿಯನ್ನಾಗಿಸಲು ಆರೆಸ್ಸೆಸ್ ಶ್ರಮ: ಭಾಗವತ್

Last Updated 21 ಆಗಸ್ಟ್ 2022, 14:24 IST
ಅಕ್ಷರ ಗಾತ್ರ

ನವದೆಹಲಿ: ‘ರಾಷ್ಟ್ರೀಯ ಸ್ವಯಂ ಸೇವಾಸಂಘವು (ಆರ್‌ಎಸ್‌ಎಸ್‌) ಸಮಾಜವನ್ನು ಜಾಗೃತಿಗೊಳಿಸುವ ಮತ್ತು ಒಗ್ಗೂಡಿಸುವ ಕೆಲಸವನ್ನು ಮಾಡುವ ಮೂಲಕ ಭಾರತವನ್ನು ಇಡೀ ವಿಶ್ವದಲ್ಲೇ ಮಾದರಿ ಸಮಾಜವನ್ನಾಗಿಸಲು ಶ್ರಮಿಸುತ್ತಿದೆ’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾನುವಾರ ಹೇಳಿದ್ದಾರೆ.

ಆರ್‌ಎಸ್‌ಎಸ್‌ನ ದೆಹಲಿ ಘಟಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಮ್ಮ ಸಮಾಜದ ವಿವಿಧ ವರ್ಗಗಳ ಅನೇಕ ವ್ಯಕ್ತಿಗಳು ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನದ ಜತೆಗೆ ಕೊಡುಗೆಯನ್ನೂ ನೀಡಿದ್ದಾರೆ. ಆದರೆ, ನಾವು ಒಂದು ಸಮಾಜವಾಗಿ ಒಗ್ಗೂಡಿ ಮುಂಚೂಣಿಗೆ ಬರಲು ಸಮಯ ಹಿಡಿಯಿತು’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

‘ಸಮಾಜಮುಖಿಯಾಗಿ ಚಿಂತನೆ ನಡೆಸುವಂಥದ್ದು ಭಾರತೀಯರ ಮೂಲ ಸ್ವಭಾವ. ಇದು ಅವರ ಡಿಎನ್‌ಎಯಲ್ಲೇ ಬಂದಿದೆ. ಇಂಥ ಗುಣಗಳನ್ನು ನಾವು ಪ್ರೋತ್ಸಾಹಿಸಬೇಕು.ಅಂತೆಯೇ ಆರ್‌ಎಸ್‌ಎಸ್‌ನ ಕಾರ್ಯಕರ್ತರು ತಮ್ಮ ವೈಯಕ್ತಿಕ ಹಿತಾಸಕ್ತಿಗಳತ್ತ ಗಮನ ಕೊಡದೇ ಸಮಾಜಮುಖಿಯಾಗಿ ಕೆಲಸ ಮಾಡಬೇಕು’ ಎಂದೂ ಅವರು ಸಲಹೆ ನೀಡಿದರು.

‘ಯಾವುದೇ ಕಲ್ಯಾಣ ಕಾರ್ಯಕ್ರಮಗಳನ್ನು ಮಾಡುವಾಗ ಕಾರ್ಯಕರ್ತರು ‘ನಾನು ಮತ್ತು ನನ್ನದು’ ಎಂಬುದಕ್ಕಿಂತ ‘ನಮಗೆ, ನಮ್ಮದು’ ಎನ್ನುವುದಕ್ಕೆ ಆದ್ಯತೆ ನೀಡಬೇಕು. ಇದು ಸಮಾಜವು ವಿಕಾಸಗೊಳ್ಳಲು ಸಹಾಯ ಮಾಡುತ್ತದೆ’ ಎಂದೂ ಭಾಗವತ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT