ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3ನೇ ದಿನ: ಕಿರಣ್​ ಬೇಡಿ ವಿರುದ್ಧ ಪುದುಚೇರಿ ಸಿಎಂ ನಾರಾಯಣಸ್ವಾಮಿ ಅಹೋರಾತ್ರಿ ಧರಣಿ

Last Updated 10 ಜನವರಿ 2021, 15:52 IST
ಅಕ್ಷರ ಗಾತ್ರ

ಪುದುಚೇರಿ: ಸರ್ಕಾರದ ಅಭಿವೃದ್ಧಿ ಯೋಜನೆಗಳು, ಕಾರ್ಯಗಳಿಗೆ ಲೆಫ್ಟಿನೆಂಟ್​ ಗವರ್ನರ್​ ಕಿರಣ್​ ಬೇಡಿ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆರೋಪಿಸಿ ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಅವರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ 3ನೇ ದಿನಕ್ಕೆ ಕಾಲಿಟ್ಟಿದೆ.

ನಾರಾಯಣಸ್ವಾಮಿ ಮತ್ತು ಕಿರಣ್​ ಬೇಡಿ ನಡುವಿನ ಜಟಾಪಟಿ ಹೊಸದಲ್ಲ, ರಾಜ್ಯದ ಅಭಿವೃದ್ಧಿಕಾರ್ಯಗಳಿಗೆ ಕಿರಣ್‌ ಬೇಡಿ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆರೋಪಿಸಿ ನಾರಾಯಣಸ್ವಾಮಿ ಈ ಹಿಂದೆ ಮೂರು ಸಲ ಧರಣಿ ನಡೆಸಿದ್ದರು. ಇದೀಗ ಮತ್ತೆ 4 ದಿನಗಳ ಪ್ರತಿಭಟನೆ ನಡೆಸುತ್ತಿದ್ದಾರೆ.

ನಾರಾಯಣಸ್ವಾಮಿ ನೇತೃತ್ವದದಲ್ಲಿ ಸರ್ಕಾರದ ಸಚಿವರು, ಶಾಸಕರು ಜ.8ರಿಂದ ರಾಜ್ ​ನಿವಾಸ್​ ಎದುರು ನಾಲ್ಕು ದಿನಗಳ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಈ ದರಣಿಗೆ ಸಿಪಿಐ, ಸಿಪಿಐ (ಎಂ), ವಿಸಿಕೆ ಪಕ್ಷಗಳ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಕಿರಣ್‌ ಬೇಡಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವ ದರಣಿ ನಿರತರು ಕೂಡಲೇ ಕಿರಣ್ ಬೇಡಿಯನ್ನು ಕೇಂದ್ರ ಸರ್ಕಾರ ವಾಪಾಸು ಕರೆಸಿಕೊಳ್ಳಬೇಕು ಅಥವಾ ಲೆಫ್ಟಿನೆಂಟ್​ ಗವರ್ನರ್ ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT