ದೆಹಲಿ: ನಟ, ನಿರ್ದೇಶಕ ಸತೀಶ್ ಕೌಶಿಕ್ ಅವರನ್ನು ನನ್ನ ಗಂಡ ಮುಗಿಸಲು ಹೊಂಚು ಹಾಕಿದ್ದರು ಎಂಬ ಮಹಿಳೆಯೊಬ್ಬರ ಹೇಳಿಕೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.

ಸಾವಿಗೆ ಒಂದು ದಿನ ಮೊದಲು ನಟ ಸತೀಶ್ ಕೌಶಿಕ್ ಅವರು ದೆಹಲಿಯ ಫಾರ್ಮ್‌ಹೌಸ್‌ವೊಂದರಲ್ಲಿ ನಡೆದಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ಫಾರ್ಮ್‌ಹೌಸ್ ಮಾಲೀಕನ ವಿಚ್ಛೇದಿತ ಪತ್ನಿ ಗಂಭೀರ ಆರೋಪ ಮಾಡಿದ್ದು, ಆಕೆಯನ್ನು ವಿಚಾರಣೆ ನಡೆಸುವುದಾಗಿ ದೆಹಲಿ ಪೊಲೀಸರು ಭಾನುವಾರ ಹೇಳಿದ್ದಾರೆ.

‘ತನ್ನ ಪತಿ ಕೌಶಿಕ್ ಅವರಿಂದ ₹15 ಕೋಟಿ ಸಾಲ ಪಡೆದಿದ್ದರು. ಅದನ್ನು ಹಿಂದಿರುಗಿಸಲು ಪತಿಗೆ ಇಷ್ಟವಿರಲಿಲ್ಲ’ ಎಂದು ಮಹಿಳೆ ದೆಹಲಿ ಪೊಲೀಸ್ ಕಮಿಷನರ್‌ಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ಮಹಿಳೆಯ ಆರೋಪಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ದೆಹಲಿ ಪೊಲೀಸರು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ‘ಈ ವಿಷಯದ ಬಗ್ಗೆ ತನಿಖೆ ನಡೆಸಲು ನೈಋತ್ಯ ದೆಹಲಿಯ ಇನ್ಸ್‌ಪೆಕ್ಟರ್ ಮಟ್ಟದ ಅಧಿಕಾರಿಗೆ ಸೂಚಿಸಲಾಗಿದೆ. ಮಹಿಳೆಯನ್ನು ವಿಚಾರಣೆಗೆ ಕರೆಸಲಾಗುವುದು. ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುವುದು’ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಸತೀಶ್ ಕೌಶಿಕ್ ಸಾವಿನಲ್ಲಿ ಯಾವುದೇ ಶಂಕೆ ಇಲ್ಲ ಎಂದು ಪೊಲೀಸರು ಈ ಹಿಂದೆ ಹೇಳಿದ್ದರು. ಅವರ ಸಾವಿಗೆ ಹೃದಯಸ್ತಂಭನ ಕಾರಣ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಅವರದ್ದು ಸಹಜ ಸಾವು ಎಂದು ಪೊಲೀಸರು ತಿಳಿಸಿದ್ದರು.

ತನ್ನ ಪತಿ ಕೌಶಿಕ್ ಅವರನ್ನು ನನಗೆ ಪರಿಚಯ ಮಾಡಿಕೊಟ್ಟಿದ್ದರು. 2022ರ ಆಗಸ್ಟ್ 23ರಂದು ಕೌಶಿಕ್ ಅವರು ದುಬೈನಲ್ಲಿ ನಮ್ಮನ್ನು ಭೇಟಿ ಮಾಡಿದ್ದರು. ಆಗ ₹15 ಕೋಟಿ ಹಿಂದಿರುಗಿಸುವಂತೆ ತನ್ನ ಪತಿಗೆ ಹೇಳಿದ್ದರು’ ಎಂದು ಮಹಿಳೆ ಮಾಹಿತಿ ನೀಡಿದ್ದಾರೆ.

‘ನಾನು ಡ್ರಾಯಿಂಗ್ ರೂಮ್‌ನಲ್ಲಿ ಇದ್ದೆ. ಅಲ್ಲಿ ಕೌಶಿಕ್ ಮತ್ತು ನನ್ನ ಪತಿ ಇಬ್ಬರೂ ಜಗಳವಾಡಿದರು. ನನ್ನ ಪತಿ ಕೌಶಿಕ್‌ಗೆ ಶೀಘ್ರದಲ್ಲೇ ಹಣವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದರು. ನಾನು ಈ ಬಗ್ಗೆ ನನ್ನ ಗಂಡನನ್ನು ಕೇಳಿದೆ. ಕೋವಿಡ್ ಸಮಯದಲ್ಲಿ ಹಣವನ್ನು ಕಳೆದುಕೊಂಡಿದ್ದಾಗಿ ಅವರು ಹೇಳಿದರು. ಕೌಶಿಕ್‌ರನ್ನು ಮುಗಿಸಲು ಯೋಜಿಸುತ್ತಿರುವುದಾಗಿ ನನ್ನ ಪತಿ ಹೇಳಿದ್ದರು’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಹೃದಯಾಘಾತಕ್ಕೆ ಒಳಗಾಗಿದ್ದ ಕೌಶಿಕ್ (66) ಅವರು ಗುರುವಾರ ಮುಂಜಾನೆ ಮೃತಪಟ್ಟಿದ್ದರು.

ಕೌಶಿಕ್ ತಮ್ಮ ಮ್ಯಾನೇಜರ್ ಸಂತೋಷ್ ರೈ ಅವರೊಂದಿಗೆ ಬುಧವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ದೆಹಲಿಗೆ ಬಂದು ಬಿಜ್ವಾಸನ್‌ನಲ್ಲಿರುವ ತಮ್ಮ ಸ್ನೇಹಿತನ ನಿವಾಸದಲ್ಲಿ ತಂಗಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ (ನೈಋತ್ಯ) ರಾಜೀವ್ ಕುಮಾರ್ ಶನಿವಾರ ಹೇಳಿದ್ದಾರೆ.

ಪಾರ್ಟಿ ನಡೆದಿದ್ದ ದೆಹಲಿಯ ಫಾರ್ಮ್‌ಹೌಸ್‌ನಿಂದ ಕೆಲವು 'ಔಷಧಿ'ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

"ತೇರೆ ನಾಮ್" ಮತ್ತು "ಮುಜೆ ಕುಚ್ ಕೆಹನಾ ಹೈ" ಅವರ ನಿರ್ದೇಶನದಿಂದ ಖ್ಯಾತಿ ಗಳಿಸಿದ್ದ ಕೌಶಿಕ್ ಅವರು ಪತ್ನಿ ಶಶಿ ಮತ್ತು ಮಗಳು ವಂಶಿಕಾ ಅವರನ್ನು ಅಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.