ನವದೆಹಲಿ: ಇದೇ ಮೊದಲ ಬಾರಿಗೆ, ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠದ ಕಲಾಪಗಳ ನೇರ ಪ್ರಸಾರಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ಈ ಕಲಾಪಗಳನ್ನು webcast.gov.in/scindia/ ನಲ್ಲಿ ವೀಕ್ಷಿಸಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ನ್ಯಾಯಾಲಯದ ಕಲಾಪಗಳನ್ನು ನೇರ ಪ್ರಸಾರ ಮಾಡಲಿರುವ ಸುಪ್ರೀಂಕೋರ್ಟ್, ನಂತರ ಕಲಾಪಗಳ ವಿಡಿಯೊಗಳನ್ನು ತನ್ನ ಸರ್ವರ್‌ನಲ್ಲಿ ಅಳವಡಿಸಲಿದೆ. ಹೀಗಾಗಿ, ಜನರು ತಮ್ಮ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಹಾಗೂ ಕಂಪ್ಯೂಟರ್‌ನಲ್ಲಿ ಈ ಕಲಾಪಗಳನ್ನು ವೀಕ್ಷಿಸಬಹುದಾಗಿದೆ ಎಂದು ಮೂಲಗಳು ಹೇಳಿವೆ.

‘ಯೂಟ್ಯೂಬ್ ಮೂಲಕ ಬದಲಾಗಿ, ಕಲಾಪಗಳ ನೇರ ಪ್ರಸಾರಕ್ಕೆ ನ್ಯಾಯಾಲಯ ತಮ್ಮದೇ ಆದ ವೇದಿಕೆಯೊಂದನ್ನು ಶೀಘ್ರವೇ ಹೊಂದಲಿದೆ’ ಎಂದು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಯು.ಯು.ಲಲಿತ್ ಸೋಮವಾರ ಹೇಳಿದ್ದರು.

‘ಸಾಂವಿಧಾನಿಕ ಮಹತ್ವ ಹೊಂದಿದ ವಿಷಯಗಳಿಗೆ ಸಂಬಂಧಿಸಿದ ಕಲಾಪಗಳನ್ನು ಟೆಲಿಕಾಸ್ಟ್ ಅಥವಾ ವೆಬ್‌ಕಾಸ್ಟ್ ಮೂಲಕ ನೇರ ಪ್ರಸಾರ ಮಾಡಬೇಕು’ ಎಂದು ಈ ಹಿಂದಿನ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು 2018ರ ಸೆಪ್ಟೆಂಬರ್ 27ರಂದು ಐತಿಹಾಸಿಕ ತೀರ್ಪು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.