ಮಂಗಳವಾರ, ನವೆಂಬರ್ 30, 2021
22 °C

ನೆಹರೂ ಪ್ರಬಲ ವಿರೋಧ ಪಕ್ಷವನ್ನು ಬಯಸಿದ್ದರು: ಶಶಿ ತರೂರ್‌

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೊದಲ ಪ್ರಧಾನಿ ಜವಾಹರ ಲಾಲ್‌ ನೆಹರೂ ಚುನಾವಣೆ ಪ್ರಚಾರದ ಸಂದರ್ಭ ಹೇಳಿದ ಮಾತನ್ನು ಸ್ಮರಿಸಿರುವ ಸಂಸದ ಶಶಿ ತರೂರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಗೆ ಹೋಲಿಸಿ ಕಟುವಾಗಿ ಟೀಕಿಸಿದ್ದಾರೆ.

'ಭಾರತ ಬದಲಾಗಿದೆ. 70 ವರ್ಷಗಳ ನಂತರ 'ಕಾಂಗ್ರೆಸ್‌ ಮುಕ್ತ ಭಾರತ'ವನ್ನು ಬಯಸುತ್ತಿರುವ ಪ್ರಧಾನಿಯನ್ನು ನಾವು ನೋಡುತ್ತಿದ್ದೇವೆ. ಕೋವಿಡ್‌ ಲಸಿಕೆ ಪ್ರಮಾಣ ಪತ್ರದಲ್ಲಿ ತನ್ನ ಭಾವಚಿತ್ರವನ್ನು ಮುದ್ರಿಸಿಕೊಳ್ಳುತ್ತಿರುವುದನ್ನು ನೋಡುತ್ತಿದ್ದೇವೆ' ಎಂದು ಶಶಿ ತರೂರ್‌ ಟ್ವೀಟ್‌ ಮೂಲಕ ಕುಟುಕಿದ್ದಾರೆ.

1951/2ರ ಚುನಾವಣೆ ಪ್ರಚಾರದ ಸಂದರ್ಭ, 'ಒಬ್ಬ ವ್ಯಕ್ತಿಯ ಮಾತಿಗೆ ಲಕ್ಷಾಂತರ ಮಂದಿ ಸರಿ ಎನ್ನುವ ಭಾರತವನ್ನು ನಾನು ಬಯಸುವುದಿಲ್ಲ. ನನಗೆ ಪ್ರಬಲವಾದ ವಿರೋಧ ಪಕ್ಷ ಬೇಕು ಎಂದು ಜವಾಹರ ಲಾಲ್‌ ನೆಹರೂ ಹೇಳಿದ್ದರು' ಎಂದು ಶಶಿ ತರೂರ್‌ ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು