ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಡಗಿನಿಂದ ಉಡಾಯಿಸುವ ಸ್ವದೇಶಿ ಕ್ಷಿಪಣಿ ಪರೀಕ್ಷೆ ಯಶಸ್ವಿ

Last Updated 24 ಜೂನ್ 2022, 14:36 IST
ಅಕ್ಷರ ಗಾತ್ರ

ಬಾಲಸೋರ್‌, ಒಡಿಶಾ: ಹಡಗಿನಿಂದ ಬಹುವಿಧದ ಗುರಿಗಳನ್ನು ಭೇದಿಸುವ ಕಡಿಮೆ ವ್ಯಾಪ್ತಿಯ ಮೇಲ್ಮೈ ವಾಯು ದಾಳಿ ಕ್ಷಿಪಣಿ (ವಿಎಲ್‌–ಎಸ್‌ಆರ್‌ಎಸ್‌ಎಎಂ) ಪರೀಕ್ಷೆಯನ್ನು ಡಿಆರ್‌ಡಿಒ ಮತ್ತು ಭಾರತೀಯ ನೌಕಾಪಡೆ ಒಡಿಶಾದ ಕರಾವಳಿಯ ಚಾಂಡಿಪುರದ ಸಮಗ್ರ ಪರೀಕ್ಷಾ ಕೇಂದ್ರದಲ್ಲಿ (ಐಟಿಆರ್‌) ಶುಕ್ರವಾರ ಯಶಸ್ವಿಯಾಗಿ ನಡೆಸಿವೆ.

ವಿಎಲ್‌–ಎಸ್‌ಆರ್‌ಎಸ್‌ಎಎಂ (ವರ್ಟಿಕಲ್ ಲಾಂಚ್ ಶಾರ್ಟ್‌ ರೇಂಜ್ ಸರ್ಫೇಸ್ ಟು ಏರ್ ಮಿಸೈಲ್ ಕ್ಷಿಪಣಿ) ಹಡಗಿನಿಂದ ಉಡಾಯಿಸುವ ಕ್ಷಿಪಣಿ ವ್ಯವಸ್ಥೆಯಾಗಿದೆ. ಇದು ಸಾಗರದೊಳಗೆ ಎದುರಾಗುವ ದಾಳಿಗಳನ್ನು ಮತ್ತು ವಾಯು ಪ್ರದೇಶದಲ್ಲಿ ತೀರಾ ಸನಿಹದಲ್ಲಿ ಎದುರಾಗುವ ವೈಮಾನಿಕ ದಾಳಿಯ ಗುರಿಗಳನ್ನು ನಾಶಪಡಿಸುತ್ತದೆ.

ಅತಿ ವೇಗದ ವೈಮಾನಿಕ ಗುರಿಯನ್ನು ಪರೀಕ್ಷಾರ್ಥ ವಿಮಾನದ ವಿರುದ್ಧ ಈ ಕ್ಷಿಪಣಿಯನ್ನು ನೌಕಾಪಡೆಯ ಹಡಗಿನಿಂದ ಉಡಾವಣೆ ಮಾಡಲಾಯಿತು. ಅದು ತನ್ನ ಗುರಿಯನ್ನು ಯಶಸ್ವಿಯಾಗಿ ಭೇದಿಸಿತು. ಡಿಆರ್‌ಡಿಒ ಮತ್ತು ನೌಕಾಪಡೆಯ ಹಿರಿಯ ಅಧಿಕಾರಿಗಳು ಹಲವು ಟ್ರ್ಯಾಕಿಂಗ್ ಉಪಕರಣಗಳನ್ನು ಬಳಸಿಕೊಂಡು, ಕ್ಷಿಪಣಿ ಉಡಾವಣೆಯ ಮೇಲ್ವಿಚಾರಣೆ ನಿರ್ವಹಿಸಿದರು ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಡಿಆರ್‌ಡಿಒ ಮತ್ತು ಭಾರತೀಯ ನೌಕಾಪಡೆಯ ಈ ಯೋಜನೆಯ ಯಶಸ್ವಿಗೆ ಅಭಿನಂದಿಸಿರುವ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ‘ಇದು ಶತ್ರುಗಳ ವೈಮಾನಿಕ ಬೆದರಿಕೆಗಳ ವಿರುದ್ಧ ಭಾರತೀಯ ನೌಕಾಪಡೆಯ ಹಡಗುಗಳ ರಕ್ಷಣಾ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT