ಸೋಮವಾರ, ಡಿಸೆಂಬರ್ 6, 2021
25 °C

ಪರಮ್‌ ಬೀರ್‌ ಸಿಂಗ್‌ಗೆ ಜೀವ ಬೆದರಿಕೆ ಆಘಾತಕಾರಿ: ಮಹಾರಾಷ್ಟ್ರ ಗೃಹ ಸಚಿವ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಪರಮ್‌ ಬೀರ್‌ ಸಿಂಗ್‌ ಜೀವಕ್ಕೆ ಅಪಾಯವಿದೆ ಎಂದು ತಿಳಿದು ಆಘಾತವಾಗಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ದಿಲೀಪ್‌ ವಾಸ್ಲೆ ಪಾಟೀಲ್‌ ಗುರುವಾರ ಹೇಳಿದ್ದಾರೆ.

‘ಮುಂಬೈ ಮತ್ತು ಠಾಣೆಯ ಪೊಲೀಸ್‌ ಆಯುಕ್ತರಾಗಿದ್ದ ವ್ಯಕ್ತಿಗೆ ಜೀವ ಬೆದರಿಕೆ ಇದೆ ಎಂದು ತಿಳಿದು ನನಗೆ ಆಘಾತವಾಗಿದೆ’ ಎಂದು ವಾಸ್ಲೆ ಸುದ್ದಿಗಾರರಿಗೆ ಇಲ್ಲಿ ಹೇಳಿದರು.

ತಮಗೆ ಜೀವ ಬೆದರಿಕೆ ಇರುವುದರಿಂದ ತಲೆಮರೆಸಿಕೊಂಡಿವುದಾಗಿ ಪರಮ್‌ ಬೀರ್‌ ಸಿಂಗ್‌ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಮನವಿಗೆ ಅವರು ಪ್ರತಿಕ್ರಿಯಿಸಿದರು.

ಮಹಾರಾಷ್ಟ್ರ ಸರ್ಕಾರವು ಪರಮ್‌ ಬೀರ್‌ ಅವರ ವಿರುದ್ಧ ಪ್ರಾರಂಭಿಸಿರುವ ವಿಚಾರಣೆಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಸೋಮವಾರ ಅವರಿಗೆ ಬಂಧನದಿಂದ ರಕ್ಷಣೆ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು