ಗುರುವಾರ , ಡಿಸೆಂಬರ್ 1, 2022
20 °C

ಕ್ಯಾನ್ಸರ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ನವ್‌ಲಾಖಾ ಸ್ಥಳಾಂತರಿಸಲು ನಿರ್ದೇಶನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಎಲ್ಗಾರ್ ಪರಿಷತ್ –ಮಾವೋವಾದಿಗಳ ಸಂಪರ್ಕ ಪ್ರಕರಣದಲ್ಲಿ ಬಂಧಿತರಾಗಿರುವ ಕಾರ್ಯಕರ್ತ ಗೌತಮ್ ನವ್‌ಲಾಖಾ ಅವರನ್ನು ಚಿಕಿತ್ಸೆಗೆ ಮುಂಬೈನ ಜಸ್‌ಲೋಕ್‌ ಆಸ್ಪತ್ರೆಗೆ ಸ್ಥಳಾಂತರಿಸಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.

ನವ್‌ಲಾಖಾ ಪರವಾಗಿ ಹಾಜರಿದ್ದ ವಕೀಲರು, ‘ತಮ್ಮ ಕಕ್ಷಿದಾರರು ದೊಡ್ಡಕರುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ’ ಎಂದು ತಿಳಿಸಿದ ನಂತರ ಸುಪ್ರೀಂ ಕೋರ್ಟ್ ಈ ಸಂಬಂಧ ತಲೋಜಾ ಕಾರಾಗೃಹದ ಸೂಪರಿಂಟೆಂಡೆಂಟ್‌ ಅವರಿಗೆ ನಿರ್ದೇಶನ ನೀಡಿತು.

ಚಿಕಿತ್ಸೆ ಪಡೆಯುವುದು ಮೂಲಭೂತ ಹಕ್ಕು ಎಂದ ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್‌, ಹೃಷಿಕೇಷ್‌ ರಾಯ್ ಅವರಿದ್ದ ಪೀಠವು, ನವ್‌ಲಾಖಾ ಅವರನ್ನು ಅವರ ಸಂಗಾತಿ ಸಾಬಾ ಹುಸೇನ್‌ ಮತ್ತು ಸಹೋದರಿ ಆಸ್ಪತ್ರೆಯಲ್ಲಿ ಭೇಟಿ ಮಾಡಬಹುದು ಎಂದು ತಿಳಿಸಿತು.

‘ಅರ್ಜಿದಾರರನ್ನು ಚಿಕಿತ್ಸೆಗಾಗಿ ಜಸ್‌ಲೋಕ್ ಆಸ್ಪತ್ರೆಗೆ ಕರೆದೊಯ್ಯಬೇಕು. ಆಸ್ಪತ್ರೆಯಲ್ಲಿಯೂ ಅವರು ಪೊಲೀಸ್‌ ವಶದಲ್ಲಿಯೇ ಇರುತ್ತಾರೆ ಎಂದೂ ನಾವು ಸ್ಪಷ್ಟಪಡಿಸುತ್ತೇವೆ’ ಎಂದು ಪೀಠ ಹೇಳಿತು. ಅಲ್ಲದೆ, ಅರ್ಜಿದಾರರ ಆರೋಗ್ಯದ ತಪಾಸಣೆ ಕುರಿತಂತೆ ಸುಪ್ರೀಂ ಕೋರ್ಟ್‌ಗೆ ವರದಿಯನ್ನು ಸಲ್ಲಿಸಬೇಕು ಎಂದೂ ಆಸ್ಪತ್ರೆಯ ಆಡಳಿತಕ್ಕೆ ನಿರ್ದೇಶನ ನೀಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು