ಮಂಗಳವಾರ, ಆಗಸ್ಟ್ 9, 2022
23 °C

ಸಿಎಂ ಭಗವಂತ ಮಾನ್‌ ಪ್ರತಿನಿಧಿಸುತ್ತಿದ್ದ ಸಂಗ್ರೂರ್‌ ಕ್ಷೇತ್ರದಲ್ಲಿ ಎಎಪಿಗೆ ಸೋಲು

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಪಂಜಾಬ್‌ ಸಿಎಂ ಭಗವಂತ ಮಾನ್ ಅವರು ಪ್ರತಿನಿಧಿಸುತ್ತಿದ್ದ ಸಂಗ್ರೂರ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎಎಪಿ ಸೋಲು ಅನುಭವಿಸಿದೆ.

ಶಿರೋಮಣಿ ಅಕಾಲಿದಳದ ಸಿಮ್ರಂಜಿತ್ ಸಿಂಗ್ ಮಾನ್ ಅವರು ಸಂಗ್ರೂರ್ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

ಭಗವಂತ ಮಾನ್‌ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಜೂನ್‌ 23 ರಂದು ಚುನಾವಣೆ ನಡೆದಿತ್ತು. 

ಆಮ್ ಆದ್ಮಿ ಪಕ್ಷದ ಗುರ್ಮೈಲ್ ಸಿಂಗ್ ಅವರನ್ನು ಸುಮಾರು 5,822 ಮತಗಳಿಂದ ಸಿಮ್ರಂಜಿತ್ ಸಿಂಗ್ ಮಾನ್  ಸೋಲಿಸಿದ್ದಾರೆ. 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು