ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಾಗ ಪ್ರಧಾನಿ ಮೋದಿ ಪ್ರತಿಕ್ರಿಯೆ ಏನಾಗಿತ್ತು?

Last Updated 1 ಮಾರ್ಚ್ 2021, 6:38 IST
ಅಕ್ಷರ ಗಾತ್ರ

ನವದೆಹಲಿ: ದೇಶೀಯವಾಗಿ ಅಭಿವೃದ್ಧಿಪಡಿಸಿದ 'ಕೋವ್ಯಾಕ್ಸಿನ್' ಹಾಕಿಸಿಕೊಳ್ಳುವ ಮೂಲಕ ಎರಡನೇ ಹಂತದ ಕೋವಿಡ್-19 ಲಸಿಕೆ ವಿತರಣೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ (ಮಾ.1) ಚಾಲನೆ ನೀಡಿದರು.

ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಸೋಮವಾರ ಬೆಳಗ್ಗೆ ಪ್ರಧಾನಿ ಮೋದಿ ಕೋವಿಡ್ ಲಸಿಕೆ ಹಾಕಿಸಿಕೊಂಡರು. ಪುದುಚೇರಿ ಮೂಲದ ಸಿಸ್ಟರ್ ಪಿ. ನಿವೇದಾ ಅವರು ಪ್ರಧಾನಿ ಮೋದಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ಚುಚ್ಚಿದರು.

ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆ ಪಡೆದ ಬಳಿಕ ಪ್ರಧಾನಿ ಮೋದಿ ಅವರು ನೀಡಿರುವ ಮೊದಲ ಪ್ರತಿಕ್ರಿಯೆಯನ್ನು ಸಿಸ್ಟರ್ ನಿವೇದಾ ಮಾಧ್ಯಮ ಮಿತ್ರರೊಂದಿಗೆ ಹಂಚಿಕೊಂಡಿದ್ದಾರೆ.

'ಆಗಲೇ ಆಗೋಯ್ತಾ? ನನ್ನ ಅನುಭವಕ್ಕೂ ಕೂಡಾ ಬರಲಿಲ್ಲ' ಎಂದು ನರೇಂದ್ರ ಮೋದಿ ಪ್ರತಿಕ್ರಿಯಿಸಿರುವುದಾಗಿ ಸಿಸ್ಟರ್ ನಿವೇದಾ ವಿವರಿಸಿದರು.

ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಪ್ರಧಾನಿ ಮೋದಿ ಏಮ್ಸ್‌‍ಗೆ ಬರುವ ವಿಚಾರ ಸಿಸ್ಟರ್ ನಿವೇದಾ ಅವರಿಗೆ ತಿಳಿದಿರಲಿಲ್ಲ. ಲಸಿಕೆ ಕೇಂದ್ರದಲ್ಲಿ ನನ್ನನ್ನು ಕರ್ತವ್ಯಕ್ಕೆ ನೇಮಿಸಲಾಗಿತ್ತು. ಬಳಿಕಪ್ರಧಾನಿ ಮೋದಿ ಬರುತ್ತಿರುವ ವಿಚಾರ ತಿಳಿಯಿತು. ಪ್ರಧಾನಿ ಅವರನ್ನು ಭೇಟಿಯಾಗಲು ಸಾಧ್ಯವಾಗಿರುವುದು ತುಂಬಾ ಸಂತೋಷವನ್ನುಂಟು ಮಾಡಿದೆ ಎಂದು ಹೇಳಿದರು.

ಕೇರಳ ಮೂಲದ ನರ್ಸ್ ರೋಸಮ್ಮ ಅನಿಲ್ ಕೂಡಾ ಏಮ್ಸ್ ಆಸ್ಪತ್ರೆಯಲ್ಲಿ ಪ್ರಧಾನಿ ಭೇಟಿ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಲಸಿಕೆ ಪಡೆಯುವ ವೇಳೆಯಲ್ಲಿ ಪ್ರಧಾನಿಕ್ಷೇಮವಾಗಿದ್ದರು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT