ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿಪುರಾದಲ್ಲಿ ಕಡಿಮೆಯಾದ ಪ್ರವಾಹ ಸ್ಥಿತಿ

Last Updated 19 ಜೂನ್ 2022, 12:31 IST
ಅಕ್ಷರ ಗಾತ್ರ

ಅಗರ್ತಲಾ:‘ತ್ರಿಪುರಾದಲ್ಲಿನ ಪ್ರವಾಹ ಸ್ಥಿತಿಯು ಭಾನುವಾರದಂದು ಅಲ್ಪಟಮಟ್ಟಿಗೆ ಸುಧಾರಿಸಿದ್ದು, ಭಾರಿ ಮಳೆಯಾಗುವ ಯಾವುದೇ ಮುನ್ಸೂಚನೆ ಇಲ್ಲ. ಆದರೆ ಕಟಖಲ್ ನದಿಯಲ್ಲಿ ಒಬ್ಬ ವ್ಯಕ್ತಿ ಕೊಚ್ಚಿಕೊಂಡು ಹೋಗಿದ್ದಾರೆ’ ಎಂದುರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಅಪಾಯದ ಮಟ್ಟವನ್ನು ಮೀರಿ ಹೌರಾ ನದಿ ಹರಿಯುತ್ತಿತ್ತು. ಆದರೆ ಶನಿವಾರದಂದು ಅಗರ್ತಲಾ ಮುನ್ಸಿಪಲ್‌ ಕಾರ್ಪೊರೇಷನ್‌ ಹಾಗೂ ಸುತ್ತಮುತ್ತಲಿನ ತಗ್ಗು ಪ್ರದೇಶಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ’ ಎಂದು ಅವರು ಹೇಳಿದರು.

ಈ ಮಧ್ಯೆ ಸದರ್‌ನ ಮೇಲಖೋಲಾದ ಸಿರಾಜ್ ಮಿಯಾ ಎಂಬ ವ್ಯಕ್ತಿಯು ಹೌರಾದ ಉಪನದಿ ಕತಖಾಲ್‌ನಲ್ಲಿ ಕೊಚ್ಚಿಹೋಗಿದ್ದಾರೆ. ಅವರ ದೇಹವನ್ನು ಇನ್ನೂ ಪತ್ತೆ ಹಚ್ಚಬೇಕಾಗಿದೆ ಎಂದರು.

ಪಶ್ಚಿಮ ತ್ರಿಪುರ, ಉನಕೋಟಿ ಮತ್ತು ಉತ್ತರ ತ್ರಿಪುರಾ ಜಿಲ್ಲೆಗಳಲ್ಲಿ ಶುಕ್ರವಾರದ ಧಾರಾಕಾರ ಮಳೆಯಿಂದ ಉಂಟಾದ ಹಠಾತ್ ಪ್ರವಾಹದಿಂದ ಸುಮಾರು 12,000 ಜನರು ನಿರಾಶ್ರಿತರಾಗಿದ್ದಾರೆ. 45 ಪರಿಹಾರದ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಸದರ್‌ವೊಂದರಲ್ಲಿಯೇ 11,000 ಕ್ಕೂ ಹೆಚ್ಚು ಜನರು ನಿರಾಶ್ರಿರಾಗಿದ್ದು 42 ಶಿಬಿರಗಳಲ್ಲಿ ಆಶ್ರಯ ಪಡೆಯುವಂತೆ ತಿಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT