ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20 ಸಾವಿರ ವಲಸೆ ಕಾರ್ಮಿಕರಿಗೆ ವಸತಿ ಸೌಲಭ್ಯ: ಸೋನು ಸೂದ್‌

Last Updated 24 ಆಗಸ್ಟ್ 2020, 11:08 IST
ಅಕ್ಷರ ಗಾತ್ರ

ಮುಂಬೈ: ನೋಯ್ಡಾದಲ್ಲಿ 20 ಸಾವಿರ ವಲಸೆ ಕಾರ್ಮಿಕರಿಗೆ ವಸತಿ ಸೌಲಭ್ಯವನ್ನು ನೀಡುವುದಾಗಿ ನಟ ಸೋನು ಸೂದ್‌ ಸೋಮವಾರ ಘೋಷಿಸಿದ್ದಾರೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಸಾವಿರಾರು ವಲಸೆ ಕಾರ್ಮಿಕರು ತಮ್ಮ ಮನೆ ತಲುಪಲು ಸಾರಿಗೆ ವ್ಯವಸ್ಥೆಯ ಸಹಾಯ ಮಾಡಿದ್ದ ಸೂದ್‌, ಇದೀಗ ವಸತಿ ಸೌಲಭ್ಯ ಕಲ್ಪಿಸುವ ಕುರಿತು ಇನ್‌ಸ್ಟಾಗ್ರಾಮ್‌ ಮುಖಾಂತರ ಮಾಹಿತಿ ನೀಡಿದ್ದಾರೆ. ಜೊತೆಗೆ ಈ ಕಾರ್ಮಿಕರಿಗೆ ಸ್ಥಳೀಯ ಜವಳಿ ಕೈಗಾರಿಕೆಗಳಲ್ಲಿ ಕೆಲಸ ನೀಡಲಾಗಿದೆ ಎಂದು ಸೂದ್‌ ತಿಳಿಸಿದ್ದಾರೆ.

‘ಎನ್‌ಎಇಸಿ ಅಧ್ಯಕ್ಷ ಲಲಿತ್‌ ತುಕ್ರಾಲ್‌ ಅವರ ಬೆಂಬಲದೊಂದಿಗೆ ಈ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದ್ದು, ಕಾರ್ಮಿಕರಿಗೆ ಆರೋಗ್ಯಕರ ವಸತಿ ಸೌಲಭ್ಯವನ್ನೇ ನೀಡಲಾಗುವುದು’ ಎಂಬ ಭರವಸೆಯನ್ನು ನೀಡಿದ್ದಾರೆ. ಲಾಕ್‌ಡೌನ್‌ ವೇಳೆ ಕಾರ್ಮಿಕರಿಗೆ ನೆರವಾಗಲು ಟೋಲ್‌ಫ್ರಿ ಹಾಗೂ ವಾಟ್ಸ್‌ಆ್ಯಪ್‌ ಸಹಾಯವಾಣಿಯನ್ನು ಆರಂಭಿಸಿದ್ದ ಸೂದ್‌, ಕಾರ್ಮಿಕರು ಉದ್ಯೋಗ ಹುಡುಕಲು ಹೊಸ ಆ್ಯಪ್‌ ಕೂಡಾ ಬಿಡುಗಡೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT