ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪೈಸ್‌ಜೆಟ್‌ನ 2 ವಿಮಾನಗಳಲ್ಲಿ ತಾಂತ್ರಿಕ ದೋಷ, ತನಿಖೆಗೆ ಆದೇಶ

Last Updated 5 ಜುಲೈ 2022, 14:02 IST
ಅಕ್ಷರ ಗಾತ್ರ

ನವದೆಹಲಿ/ಕರಾಚಿ: ಸ್ಪೈಸ್‌ಜೆಟ್‌ ಸಂಸ್ಥೆಗೆ ಸೇರಿದ ಎರಡು ವಿಮಾನಗಳಲ್ಲಿ ಮಂಗಳವಾರ ತಾಂತ್ರಿಕ ದೋಷ ಕಂಡುಬಂದಿದೆ. ಕಳೆದ 17 ದಿನಗಳಲ್ಲಿ ತಾಂತ್ರಿಕ ವೈಫಲ್ಯಕ್ಕೆ ಸಂಬಂಧಿಸಿದ ಏಳು ಪ್ರಕರಣಗಳು ಸಂಸ್ಥೆಯ ವಿಮಾನಗಳಲ್ಲಿ ಕಂಡುಬಂದಿದ್ದು, ಆತಂಕ ವ್ಯಕ್ತವಾಗಿದೆ.

ಮಂಗಳವಾರ ನಡೆದ ಮೊದಲ ಪ್ರಕರಣದಲ್ಲಿ ಇಂಧನ ಸೂಚಕದಲ್ಲಿ ಲೋಪದಿಂದಾಗಿ ಇಂಧನ ಪ್ರಮಾಣ ಕಡಿಮೆ ಇದೆ ಎಂದು ತೋರಿಸಿದೆ. ಹೀಗಾಗಿ, ದೆಹಲಿಯಿಂದ ದುಬೈಗೆ ತೆರಳುತ್ತಿದ್ದ ಬೋಯಿಂಗ್‌ 737 ಮ್ಯಾಕ್ಸ್ ವಿಮಾನವು ಕರಾಚಿ ವಿಮಾನನಿಲ್ದಾಣದಲ್ಲಿ ಇಳಿದಿದೆ. ಪರಿಶೀಲನೆ ನಡೆಸಿದಾಗ ಟ್ಯಾಂಕ್‌ನಲ್ಲಿ ಸಮರ್ಪಕ ಇಂಧನವಿದ್ದುದು ಗೊತ್ತಾಗಿದೆ. ವಿಮಾನದಲ್ಲಿ ಸುಮಾರು 100 ಪ್ರಯಾಣಿಕರಿದ್ದರು.

ಇನ್ನೊಂದೆಡೆ ಸ್ಪೈಸ್‌ಜೆಟ್‌ನ ಕ್ಯೂ400 ವಿಮಾನ 23,000 ಕಿ.ಮೀ.ಎತ್ತರದಲ್ಲಿ ಹಾರಾಟ ನಡೆಸಿದ್ದಾಗ ಕಿಟಕಿ ಗಾಜಿನಲ್ಲಿ ಬಿರುಕು ಕಾಣಿಸಿದೆ. ಕಾಂಡ್ಲಾ–ಮುಂಬೈ ವಿಮಾನದಲ್ಲಿ ಈ ಘಟನೆ ನಡೆದಿದ್ದು, ಆದ್ಯತೆ ಮೇರೆಗೆ ವಿಮಾನವನ್ನು ಮುಂಬೈ ನಿಲ್ದಾಣದಲ್ಲಿ ಇಳಿಸಲಾಗಿದೆ.

ಇಂದಿನ ಎರಡೂ ಪ್ರಕಣಗಳು ಸೇರಿದಂತೆ ಒಟ್ಟು ಏಳು ಪ್ರಕರಣಗಳ ಕುರಿತು ಡಿಜಿಸಿಎ ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT