ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ| ಎಸ್‌ಪಿ ಪ್ರತಿಭಟನಾ ಮೆರವಣಿಗೆ ಅರ್ಧಕ್ಕೆ ತಡೆ: ತೀವ್ರ ಆಕ್ರೋಶ

Last Updated 19 ಸೆಪ್ಟೆಂಬರ್ 2022, 14:04 IST
ಅಕ್ಷರ ಗಾತ್ರ

ಲಖನೌ: ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಮತ್ತು ಕಾನೂನು ಮತ್ತು ಸುವ್ಯವಸ್ಥೆ ವೈಫಲ್ಯ ಖಂಡಿಸಿ ರಾಜ್ಯ ಮುಂಗಾರು ಅಧಿವೇಶನ ಆರಂಭಗೊಂಡ ಮೊದಲ ದಿನ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್‌ ನೇತೃತ್ವದಲ್ಲಿ ಸೋಮವಾರ ಕೈಗೊಂಡಿದ್ದ ಪ್ರತಿಭಟನಾ ಮೆರವಣಿಗೆಗೆ ‍ಪೊಲೀಸರು ತಡೆ ನೀಡಿದ್ದಾರೆ.

ಉತ್ತರ ಪ್ರದೇಶದ ವಿಧಾನ ಭವನಕ್ಕೆ ಹೊರಟಿದ್ದ ಮೆರವಣಿಗೆಯನ್ನು ಎಸ್‌ಪಿ ಕಚೇರಿ ಬಳಿಯ ವಿಕ್ರಮಾದಿತ್ಯ ಮಾರ್ಗದಲ್ಲಿ ಪೊಲೀಸರು ತಡೆದಿದ್ದಾರೆ. ಅನುಮತಿ ನೀಡಿದ ಮಾರ್ಗದ ಬದಲು ಬೇರೆ ಮಾರ್ಗದಲ್ಲಿ ಮೆರವಣಿಗೆ ಹೊರಟ ಕಾರಣ ತಡೆಯಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಪಿಯೂಷ್‌ಮೊರ್ಡಿಯಾ ತಿಳಿಸಿದರು.

ಪೊಲೀಸ್ ವರ್ತನೆ ಖಂಡಿಸಿ ಅಖಿಲೇಶ್ ಮತ್ತು ಪಕ್ಷದ ನಾಯಕರು ರಸ್ತೆಮಧ್ಯೆ ಕುಳಿತು ಧರಣಿ ನಡೆಸಿದರು.‍ಪ್ರತಿಭಟನಾ ಸ್ಥಳದಲ್ಲಿ ಮಾಜಿ ಸ್ಪೀಕರ್‌ಮಾತಾ ಪ್ರಸಾದ್ ಪಾಂಡೆ ನೇತೃತ್ವದಲ್ಲಿ ಎಸ್‌ಪಿ ನಾಯಕರು ಅಣಕು ಅಧಿವೇಶನ ನಡೆಸಿದರು.

ಭಾರತದಂತಹ ಗ್ರಾಮೀಣ ಪ್ರದೇಶದಲ್ಲಿ ಹಾಲು, ಮೊಸಲು, ತುಪ್ಪದ ಮೇಲೆ ಜಿಎಸ್‌ಟಿ ವಿಧಿಸಲಾಗುವುದು ಎಂದು ಯಾರೂ ಉಹಿಸಿರಲಿಲ್ಲ. ಖಾದ್ಯ ತೈಲಗಳು ಗಗನಕ್ಕೇರಿದೆ ಎಂದು ಯಾದವ್ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT