ಮೋದಿಯಿಂದ ಪೋಪ್‌ಗೆ ಆಹ್ವಾನ: ಪ್ರಶಂಸೆಯೋ? ಕೀಳರಿಮೆಯೋ?: ಸುಬ್ರಮಣಿಯನ್ ಸ್ವಾಮಿ

ಚೆನ್ನೈ: ಪೋಪ್ ಅವರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿರುವುದು ಪ್ರಶಂಸೆಗಾಗಿಯೋ? ಅಥವಾ ಕೀಳರಿಮೆಯಿಂದಲೋ? ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ’ಕೂ’ ಮಾಡಿರುವ ಅವರು, ನವೆಂಬರ್‌ನಲ್ಲಿ ವ್ಯಾಟಿಕನ್ ಸಿಟಿಯ ಕ್ಯಾಥೋಲಿಕ್ ಪೋಪ್ ಮತ್ತು ನರೇಂದ್ರ ಮೋದಿ ನಡುವಿನ ಭೇಟಿ ಸಂದರ್ಭದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಮೋದಿ ಮನವಿ ಮಾಡಿದ್ದಾರೆ ಎಂದು ವ್ಯಾಟಿಕನ್‌ನಲ್ಲಿರುವ ನನ್ನ ಆಪ್ತರು ಸಂದೇಶ ಕಳುಹಿಸಿದ್ದಾರೆ ಎಂದಿದ್ದಾರೆ.
ಹಿಂದುತ್ವವಾದಿ ಎಂದು ಕರೆಸಿಕೊಳ್ಳುವ ನಮ್ಮ ಪ್ರಧಾನಿಗಳು ಕ್ಯಾಥೋಲಿಕ್ ಪೋಪ್ ಅವರನ್ನು ಆಹ್ವಾನಿಸಿ ಪ್ರಶಂಸೆಗಾಗಿ ಯಾಕೆ ಒದ್ದಾಡುತ್ತಾರೆ? ಅಥವಾ ಕೀಳರಿಮೆಯೇ? ಎಂದು ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ.
ಈ ಹಿಂದೆ 1999 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಪೋಪ್ ಅವರನ್ನು ಭಾರತಕ್ಕೆ ಆಹ್ವಾನಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.