ಶನಿವಾರ, ಮೇ 15, 2021
24 °C

ಪಶ್ಚಿಮ ಬಂಗಾಳ: ಶಾಲೆಗಳಿಗೆ ಇಂದಿನಿಂದ ಬೇಸಿಗೆ ರಜೆ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ‘ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳ ಬೇಸಿಗೆ ರಜೆಯು ಮಂಗಳವಾರದಿಂದ ಆರಂಭವಾಗಲಿದೆ’ ಎಂದು ಪಶ್ಚಿಮ ಬಂಗಾಳ ಸರ್ಕಾರವು ಸೋಮವಾರ ತಿಳಿಸಿದೆ.

ಸಾಮಾನ್ಯವಾಗಿ ಶಾಲೆಗಳಲ್ಲಿ ಬೇಸಿಗೆ ರಜೆಯು ಮೇ ತಿಂಗಳ ಮೊದಲ ವಾರದಲ್ಲಿ ಆರಂಭವಾಗುತ್ತದೆ. ಆದರೆ ಈ ಬಾರಿ ಕೋವಿಡ್‌ ದೃಷ್ಟಿಯಿಂದ ಬೇಸಿಗೆ ರಜೆಯನ್ನು ಬೇಗ ನೀಡಲಾಗಿದೆ. 

‘ಫೆಬ್ರುವರಿ ಮಧ್ಯದಲ್ಲಿ 9,10,11 ಮತ್ತು 12ನೇ ತರಗತಿಗಳು ಪುನರಾರಂಭಗೊಂಡವು. ಆದರೆ ಪ್ರಸ್ತುತ ಕೋವಿಡ್‌ ಪರಿಸ್ಥಿತಿಯಿಂದಾಗಿ ಬೇಸಿಗೆ ರಜೆಯನ್ನು ಮುಂಚಿತವಾಗಿ ನೀಡಲಾಗಿದೆ.ಈ ಸಂಬಂಧ ಶಿಕ್ಷಣ ಇಲಾಖೆ ಇವತ್ತು ಅಧಿಸೂಚನೆ ಹೊರಡಿಸಲಿದೆ. ಖಾಸಗಿ ಶಾಲೆಗಳು ಕೂಡ ಇದನ್ನು ಪಾಲಿಸಬೇಕು’ ಎಂದು ರಾಜ್ಯದ ಶಿಕ್ಷಣ ಸಚಿವರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು