ಭಾನುವಾರ, ಸೆಪ್ಟೆಂಬರ್ 26, 2021
21 °C

ಸುನಂದಾ ಸಾವಿನ ಪ್ರಕರಣ: ನ್ಯಾಯಾಂಗದ ಮೇಲಿನ ನಂಬಿಕೆ ಬಲವಾಗಿದೆ ಎಂದ ಶಶಿ ತರೂರ್

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತೀಯ ನ್ಯಾಯಾಂಗದ ಮೇಲಿನ ನಂಬಿಕೆ ಬಲವಾಗಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಶಶಿ ತರೂರ್ ಹೇಳಿದ್ದಾರೆ.

ಸುನಂದಾ ಪುಷ್ಕರ್ (ತರೂರ್ ಪತ್ನಿ) ಸಾವಿನ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ತರೂರ್ ಅವರನ್ನು ದೆಹಲಿ ಹೈಕೋರ್ಟ್‌ ಬುಧವಾರ ಖುಲಾಸೆಗೊಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಅವರು, ಸುದೀರ್ಘ ಕಾಲದ ದುಃಸ್ವಪ್ನಕ್ಕೆ ಮಹತ್ವದ ತೀರ್ಪಿನ ಮೂಲಕ ಅಂತ್ಯ ದೊರೆತಿದೆ ಎಂದು ಹೇಳಿದ್ದಾರೆ.

ಓದಿ: 

‘ದೆಹಲಿ ಪೊಲೀಸರು ನನ್ನ ಮೇಲೆ ಹೊರಿಸಿದ್ದ ಆರೋಪದಿಂದ ಮುಕ್ತಗೊಳಿಸಿ ಜಡ್ಜ್ ಗೀತಾಂಜಲಿ ಗೋಯೆಲ್ ಅವರು ನೀಡಿರುವ ಆದೇಶಕ್ಕಾಗಿ ಅವರಿಗೆ ವಿನಮ್ರವಾದ ಧನ್ಯವಾದ ತಿಳಿಸಲು ಬಯಸುತ್ತೇನೆ’ ಎಂದು ತರೂರ್ ಪ್ರಕಟಣೆಯೊಂದನ್ನು ಟ್ವೀಟ್ ಮಾಡಿದ್ದಾರೆ.

‘ಹತ್ತಾರು ಆಧಾರರಹಿತ ಆರೋಪಗಳನ್ನು ಮತ್ತು ಮಾಧ್ಯಮದ ನಿಂದನೆಯನ್ನು ತಾಳ್ಮೆಯಿಂದ ಎದುರಿಸಿದ್ದೇನೆ. ಭಾರತೀಯ ನ್ಯಾಯಾಂಗದ ಮೇಲೆ ನಂಬಿಕೆ ಇಟ್ಟುಕೊಂಡಿದ್ದೆ. ಆ ನಂಬಿಕೆ ಇಂದು ಬಲವಾಗಿದೆ’ ಎಂದೂ ಪ್ರಕಟಣೆಯಲ್ಲಿ ಅವರು ಉಲ್ಲೇಖಿಸಿದ್ದಾರೆ.

ತಮ್ಮ ಪರ ವಾದ ಮಂಡಿಸಿದ ವಕೀಲರಿಗೂ ತರೂರ್ ಧನ್ಯವಾದ ಸಮರ್ಪಿಸಿದ್ದಾರೆ.

2014ರ ಜನವರಿ 17ರಂದು ದೆಹಲಿಯ ಐಷಾರಾಮಿ ಹೋಟೆಲ್‌ನಲ್ಲಿ ಸುನಂದಾ ಪುಷ್ಕರ್‌ ಅವರ ಶವ ಪತ್ತೆಯಾಗಿತ್ತು. ಶಶಿ ತರೂರ್‌ ಅವರ ಅಧಿಕೃತ ಬಂಗಲೆ ನವೀಕರಣ ನಡೆಯುತ್ತಿದ್ದರಿಂದ ದಂಪತಿ ಹೋಟೆಲ್‌ನಲ್ಲಿ ತಂಗಿದ್ದರು. ಇದಾದ ಬಳಿಕ ತರೂರ್‌ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು