ಬುಧವಾರ, ಮಾರ್ಚ್ 22, 2023
22 °C

ಸಿಝಡ್‌ಎಂಪಿಗೆ ಸಿದ್ಧತೆ: ವಿಚಾರಣೆಗೆ ಸಮಯ ನೀಡಲು ಸುಪ್ರೀಂ ಕೋರ್ಟ್ ನಕಾರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕರಾವಳಿ ವಲಯ ನಿರ್ವಹಣಾ ಯೋಜನೆಗೆ (ಸಿಝಡ್‌ಎಂಪಿ) ಸಿದ್ಧತೆಗೆ ಸಂಬಂಧಿಸಿದ ವಿಚಾರಣೆಗೆ ಇನ್ನಷ್ಟು ಕಾಲಾವಕಾಶವನ್ನು ಕೊಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ನ್ಯಾಯಮೂರ್ತಿಗಳಾದ ಎಸ್‌.ಎ.ನಜೀರ್ ಮತ್ತು ಕೃಷ್ಣಮೂರ್ತಿ ಅವರಿದ್ದ ಪೀಠವು ಈ ಸಂಬಂಧ ಸೇವಾ ಸಂಸ್ಥೆಯಾದ ಗೋವಾ ಫೌಂಡೇಷನ್ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿತು.

ಗೋವಾ ಫೌಂಡೇಷನ್ ಪರ ಹಾಜರಿದ್ದ ಹಿರಿಯ ವಕೀಲ ಸಂಜಯ್ ಪಾರಿಖ್‌, ’ರಾಜ್ಯದಲ್ಲಿ ಲಾಕ್‌ಡೌನ್ ಜುಲೈ 12ರವರೆಗೂ ವಿಸ್ತರಣೆಯಾಗಿದೆ. ಲಾಕ್‌ ಡೌನ್‌, ಕರ್ಫ್ಯೂ ಕಾರಣದಿಂದ ವಿಚಾರಣೆಯ ಸಂದರ್ಭದಲ್ಲಿ ಮೀನುಗಾರರು, ಗ್ರಾಮೀಣ ಜನರು ಬರಲಾಗದು’ ಎಂದು ವಾದಿಸಿದ್ದರು.

ಇದಕ್ಕೆ ಸುಪ್ರೀಂ ಕೋರ್ಟ್‌, ಏನು ಕರ್ಫ್ಯೂ. ನಮಗೆ ಆ ಪ್ರದೇಶದ ಅರಿವು ಚೆನ್ನಾಗಿದೆ. ನೀವು ಹಸಿರು ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದು, ಸಮಯ ವಿಸ್ತರಣೆ ಕೇಳಿ. ಅದು ಪಂಚ ಸದಸ್ಯರ ಪೀಠ.ಅರ್ಜಿ ವಜಾ ಮಾಡುತ್ತೇವೆ’ ಎಂದು ಪ್ರತಿಕ್ರಿಯಿಸಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು