ಶನಿವಾರ, ಜೂನ್ 25, 2022
24 °C

ಕೋವಿಡ್: ವೈದ್ಯಕೀಯ ಉಪಕರಣಗಳಿಗೆ ಕಡಿಮೆ ಜಿಎಸ್‌ಟಿ ವಿಧಿಸಲು ಸುಶೀಲ್ ಮೋದಿ ಸಲಹೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್ ಲಸಿಕೆ, ವೆಂಟಿಲೇಟರ್ ಮತ್ತು ಇತರ ಅಗತ್ಯ ವೈದ್ಯಕೀಯ ಉಪಕರಣಗಳ ಮೇಲೆ ಅತಿ ಕಡಿಮೆ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ವಿಧಿಸುವ ಮೂಲಕ ಅವುಗಳನ್ನು ಕೈಗೆಟಕುವ ಬೆಲೆಯಲ್ಲಿ ದೊರೆಯುವಂತೆ ಮಾಡಬೇಕು ಎಂದು ಬಿಜೆಪಿ ನಾಯಕ ಸುಶೀಲ್ ಮೋದಿ ಸಲಹೆ ನೀಡಿದ್ದಾರೆ.

ಲಸಿಕೆ ಮತ್ತು ಕೋವಿಡ್ ಸೋಂಕಿತರ ಚಿಕಿತ್ಸೆಯಲ್ಲಿ ಬಳಸುವ ಅಗತ್ಯ ವೈದ್ಯಕೀಯ ಉಪಕರಣಗಳ ಮೇಲೆ ತಲಾ ಶೇ 0.1ರಷ್ಟು ಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿ ವಿಧಿಸಬೇಕು. ಹೀಗೆ ಮಾಡುವುದರಿಂದ ಈ ಸಾಂಕ್ರಾಮಿಕದ ಸಂದರ್ಭದಲ್ಲಿ ಜನರಿಗೆ ಪ್ರಯೋಜನವಾಗಲಿದೆ ಎಂದು ಅವರು ಹೇಳಿದ್ದಾರೆ.

ಓದಿ: 

ಹಾಗೆಂದು ತೆರಿಗೆ ವಿಧಿಸದೇ ಇರುವುದರಿಂದಲೂ ಪ್ರಯೋಜನವಿಲ್ಲ. ಯಾಕೆಂದರೆ, ಇದರಿಂದ ಉತ್ಪಾದಕರಿಗೆ ‘ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್’ ದೊರೆಯದೆ ಅಂತಿಮವಾಗಿ ಗ್ರಾಹಕರಿಗೆ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ ಅತ್ಯಲ್ಪ ತೆರಿಗೆ ವಿಧಿಸುವ ಆಯ್ಕೆಯನ್ನು ಪರಿಗಣಿಸಬಹುದು ಎಂದು ಅವರು ಹೇಳಿದ್ದಾರೆ.

ಸದ್ಯ ದೇಶೀಯವಾಗಿ ಉತ್ಪಾದಿಸಲಾಗುವ ಕೋವಿಡ್ ಲಸಿಕೆ ಮೇಲೆ ಶೇ 5 ಜಿಎಸ್‌ಟಿ ಮತ್ತು ಕೋವಿಡ್ ಔಷಧ ಹಾಗೂ ಆಮ್ಲಜನಕ ಸಾಂದ್ರಕಗಳ ಮೇಲೆ ಶೇ 12 ಜಿಎಸ್‌ಟಿ ವಿಧಿಸಲಾಗುತ್ತಿದೆ.

ಓದಿ: 

ಇದು ವೈಯಕ್ತಿಕ ಅಭಿಪ್ರಾಯವಷ್ಟೆ. ಜಿಎಸ್‌ಟಿ ಮಂಡಳಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಮೋದಿ ಹೇಳಿದ್ದಾರೆ. ಬಿಹಾರದ ಹಣಕಾಸು ಸಚಿವರಾಗಿದ್ದಾಗ ಮೋದಿಯವರು ಜಿಎಸ್‌ಟಿ ಮಂಡಳಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು