ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಬ್ಲಿಗಿ ಜಮಾತ್‌ ಪ್ರಕರಣ: ಏಳು ವಿದೇಶಿಯರು ಸೇರಿ 17 ಜನ ಆರೋಪಮುಕ್ತ

Last Updated 19 ಫೆಬ್ರುವರಿ 2021, 5:55 IST
ಅಕ್ಷರ ಗಾತ್ರ

ಲಖನೌ: ತಬ್ಲಿಗಿ ಜಮಾತ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಏಳು ವಿದೇಶಿಯರೂ ಸೇರಿದಂತೆ 17 ಜನರನ್ನು ಇಲ್ಲಿನ ನ್ಯಾಯಾಲಯವು ಆರೋಪಮಕ್ತಗೊಳಿಸಿದೆ.

ಕೊರೊನಾ ವೈರಸ್‌ಗೆ ಕಡಿವಾಣ ಹಾಕಲು ಜಾರಿಗೊಳಿಸಲಾಗಿದ್ದ ಲಾಕ್‌ಡೌನ್‌ ವೇಳೆ ಇವರ ವಿರುದ್ಧ ವಿವಿಧ ಆರೋಪಗಳಡಿ ಪ್ರಕರಣ ದಾಖಲಾಗಿತ್ತು.

ಆದರೆ ಇವರ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಮೇಲ್ನೋಟಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಿಲ್ಲದ ಕಾರಣ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸುತ್ತಿರುವುದಾಗಿಇಲ್ಲಿನ ಸಿಜೆಎಂ ನ್ಯಾಯಾಲಯ ತಿಳಿಸಿದೆ. ಈ ಕುರಿತು ನ್ಯಾಯಾಲಯ ಬುಧವಾರ ಆದೇಶ ಹೊರಡಿಸಿದೆ.

ಆರೋಪಮುಕ್ತಗೊಂಡ 17 ಜನರಲ್ಲಿ ಏಳು ಜನರು ಇಂಡೋನೇಷ್ಯಾ ಪ್ರಜೆಗಳಾಗಿದ್ದಾರೆ. ಉಳಿದವರು ಭಾರತೀಯರು.

2020ರ ಜನವರಿ 20ರಂದು ಅಧಿಕೃತ ವೀಸಾ ಮತ್ತು ಪಾಸ್‌ಪೋರ್ಟ್‌ನೊಂದಿಗೆ ಭಾರತಕ್ಕೆ ಬಂದಿದ್ದಾಗಿ ಇಂಡೋನೇಷ್ಯಾದ ಪ್ರಜೆಗಳು ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಿಳಿಸಿದ್ದರು. ಅಲ್ಲದೆ, ಇಂಡೋನೇಷ್ಯಾದಲ್ಲಿ ಕೋವಿಡ್‌–19 ಪ್ರಕರಣ ಮೊದಲಿಗೆ ಪತ್ತೆಯಾಗಿದ್ದು 2020ರ ಮಾರ್ಚ್‌ 2ಕ್ಕೆ ಎಂಬುದನ್ನು ಅವರು ಗಮನಕ್ಕೆ ತಂದಿದ್ದರು.

ಅವರ ವಿರುದ್ಧ ಅಲಹಾಬಾದ್‌ನ ಶಹಗಂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಅವರೆಲ್ಲರಿಗೂ ಜಾಮೀನು ದೊರೆತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT