ಗುರುವಾರ , ಜನವರಿ 20, 2022
15 °C

ನವೆಂಬರ್‌ 1ರ ಬದಲು ಜುಲೈ 18ರಂದು ತಮಿಳುನಾಡು ದಿನ ಆಚರಣೆ: ಸಿಎಂ ಸ್ಟಾಲಿನ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ತಮಿಳುನಾಡು ರಾಜ್ಯ ಸಂಸ್ಥಾಪನಾ ದಿನವನ್ನು ನವೆಂಬರ್‌ 1ರ ಬದಲು ಜುಲೈ 18ರಂದು ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಶನಿವಾರ ತಿಳಿಸಿದ್ದಾರೆ.

ರಾಜ್ಯ ಸಂಸ್ಥಾಪನಾ ದಿನವನ್ನು ನವೆಂಬರ್‌ 1ರಂದು ಆಚರಿಸಲು ಹಿಂದಿನ ಎಐಎಡಿಎಂಕೆ ಸರ್ಕಾರ 2019ರಲ್ಲಿ ತಿರ್ಮಾನಿಸಿತ್ತು.

ಸ್ಟಾಲಿನ್‌ ಅವರ ಈ ನಿರ್ಧಾರವನ್ನು ಟೀಕಿಸಿರುವ ಎಐಎಡಿಎಂಕೆ, ‘ಇದು ಸೇಡಿನ ರಾಜಕಾರಣ’ ಎಂದಿದೆ.

‘ಆಂಧ್ರಪ್ರದೇಶ, ಕರ್ನಾಟಕ ಮತ್ತು ಕೇರಳದ ಭಾಗಗಳು ಆಗಿನ ಮದ್ರಾಸ್ ಪ್ರಾಂತ್ಯದಿಂದ 1956 ನವೆಂಬರ್ 1 ರಂದು ಹೊರ ಹೋದವು, ನಂತರ ದೇಶದಲ್ಲಿ ರಾಜ್ಯಗಳನ್ನು ಭಾಷಾವಾರು ಏಕೀಕರಣ ಮಾಡಲಾಯಿತು’ ಎಂದು ಸ್ಟಾಲಿನ್‌ ಹೇಳಿದ್ದಾರೆ.

ನವೆಂಬರ್ 1 ಗಡಿ ಹೋರಾಟವನ್ನು ಮಾತ್ರ ಸೂಚಿಸುತ್ತದೆ. ಆ ದಿನವನ್ನು ತಮಿಳುನಾಡು ದಿನವನ್ನಾಗಿ ಆಚರಿಸುವುದು ಸೂಕ್ತವಲ್ಲ ಎಂದು ವಿದ್ವಾಂಸರು, ರಾಜಕೀಯ ಪಕ್ಷಗಳು ಹಾಗೂ ಸಂಘ ಸಂಸ್ಥೆಗಳು ಒತ್ತಾಯಿಸಿವೆ ಎಂದೂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು