ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಯೋತಿಷಿ ಮಾತು ಕೇಳಿ ಪ್ರಿಯಕರನಿಗೆ ವಿಷಪ್ರಾಶನ ಮಾಡಿಸಿದ PG ಓದುತ್ತಿದ್ದ ಯುವತಿ!

Last Updated 30 ಅಕ್ಟೋಬರ್ 2022, 16:03 IST
ಅಕ್ಷರ ಗಾತ್ರ

ತಿರುವನಂತಪುರಂ: ಕೇರಳದಲ್ಲಿ ಇತ್ತೀಚೆಗೆ ಮೂಢನಂಬಿಕೆಯಿಂದ ನಡೆದ ನರಬಲಿ ಪ್ರಕರಣ ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು. ಇದೀಗ ಇಂತಹದೇ ಮತ್ತೊಂದು ಪ್ರಕರಣ ವರದಿಯಾಗಿದೆ.

ಸ್ನಾತಕೋತ್ತರ ಪದವಿ ಓದುತ್ತಿದ್ದ22 ವರ್ಷದ ವಿದ್ಯಾರ್ಥಿನಿಯೊಬ್ಬಳುಮೂಢನಂಬಿಕೆಯಿಂದ ತನ್ನ ಪ್ರಿಯಕರನಿಗೆ ವಿಷಪ್ರಾಶನ ಮಾಡಿಸಿ ಕೊಲೆಗೈದ ಘಟನೆ ತಿರುವನಂತಪುರಂ ಜಿಲ್ಲೆಯಲ್ಲಿ ನಡೆದಿದೆ.

ತಮಿಳುನಾಡು–ಕೇರಳ ಗಡಿಯಲ್ಲಿರುವ ರಾಮವರಂ ಚಿರಾ ಎಂಬ ಊರಿನ 22 ವರ್ಷದ ಶರೋನ್ ರಾಜ್ ಎಂಬ ಯುವಕ ಕೊಲೆಯಾದ ದುರ್ದೈವಿ.

ಶರೋನ್ ರಾಜ್‌ ಜೊತೆ ಪ್ರೇಮ ಸಂಬಂಧ ಹೊಂದಿದ್ದ ಗ್ರೀಷ್ಮಾ ಎಂಬ 22 ವರ್ಷದ ಯುವತಿ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದಳು. ಆ ನಂತರ ಈ ಸಂಬಂಧ ಮುರಿದು ಬಿದ್ದು ಗ್ರೀಷ್ಮಾ ಮತ್ತೊಂದು ಹುಡುಗನ ಜೊತೆ ಮದುವೆಗೆ ಸಿದ್ಧತೆ ನಡೆಸಿದ್ದಳು. ಆದರೆ, ಜ್ಯೋತಿಷಿಯೊಬ್ಬ, ನಿನ್ನ ಮೊದಲನೇ ಸಬಂಧದ ವರ ಸತ್ತರೇ ಮಾತ್ರ ನೀನು ನಿನ್ನ ಮುಂದಿನ ಜೀವನದಲ್ಲಿ ಸಂತೋಷವಾಗಿರಬಹುದು ಎಂದು ಹೇಳಿದ್ದನಂತೆ.

ಇದನ್ನು ನಂಬಿದ ಗ್ರೀಷ್ಮಾ, ಶರೋನ್ ರಾಜ್‌ನನ್ನು ನಂಬಿಸಿ ಮನೆಗೆ ಕರೆಸಿಕೊಂಡು ಕಾಪರ್ ಸಲ್ಪೇಟ್ ಮಿಶ್ರಿತ ವಿಷವನ್ನು ಆಯರ್ವೇದ ಔಷಧಿ ಎಂದು ಕುಡಿಸಿದ್ದಳು. ಆದರೆ, ಶರೋನ್ ರಾಜ್ ಚಿಕಿತ್ಸೆ ಫಲಿಸದೇ ಕಳೆದ ಅಕ್ಟೋಬರ್ 25 ರಂದು ಮೃತರಾಗಿದ್ದಾರೆ.

ಪ್ರಕರಣದ ತನಿಖೆಯನ್ನು ವಿಶೇಷ ಅಪರಾಧ ದಳಕ್ಕೆ ವಹಿಸಲಾಗಿದ್ದು, ಗ್ರೀಷ್ಮಾ ವಿಷಪ್ರಾಶನ ಮಾಡಿಸಿದ ಸಂಗತಿ ಬೆಳಕಿಗೆ ಬಂದಿದೆ, ತನಿಖೆ ನಡೆಯುತ್ತಿದೆ ಎಂದು ತಿರುವನಂತಪುರ ಗ್ರಾಮೀಣ ಎಸ್‌ಪಿ ದಿವ್ಯಾ ಗೋಪಿನಾಥ್ ಅವರು ತಿಳಿಸಿದ್ದಾರೆ.

ಗ್ರೀಷ್ಮಾಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಶರೋನ್ ರಾಜ್ ತಂದೆ–ತಾಯಿ ಒತ್ತಾಯಿಸಿದ್ದಾರೆ. ಇತ್ತೀಚೆಗೆ ಕೇರಳದ ಪತ್ತನಂತಿಟ್ಟು ಬಳಿ ಮೂವರು ಸೇರಿಕೊಂಡು ಮೂಢನಂಬಿಕೆಯಿಂದ ಇಬ್ಬರು ಮಹಿಳೆಯರನ್ನು ನರಬಲಿ ಕೊಟ್ಟ ಪ್ರಕರಣ ವರದಿಯಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT