ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ: 31 ವರ್ಷಗಳ ನಂತರ ತೆರೆದ ಶೀತಲ್ ನಾಥ್ ದೇವಾಲಯ

Last Updated 17 ಫೆಬ್ರುವರಿ 2021, 4:23 IST
ಅಕ್ಷರ ಗಾತ್ರ

ಶ್ರೀನಗರ: ಉಗ್ರವಾದದಿಂದಾಗಿ 31 ವರ್ಷಗಳಿಂದ ಮುಚ್ಚಿದ ಶೀತಲ್ ನಾಥ್ ದೇವಾಲಯವನ್ನು ಮತ್ತೆ ತೆರೆಯಲಾಗಿದೆ.

ಮಂಗಳವಾರಬಸಂತ ಪಂಚಮಿಯ ಶುಭ ಸಂದರ್ಭದಲ್ಲಿ ಶೀತಲ್ ನಾಥ್ ದೇವಾಲಯವನ್ನು ತೆರೆಯಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು ಎಂದು ದೇವಾಲಯದ ಆಡಳಿತಮಂಡಳಿ ಸದಸ್ಯರು ತಿಳಿಸಿದ್ದಾರೆ.

ಇಲ್ಲಿನ ಹಬ್ಬಾ ಕಡಲ್ ಪ್ರದೇಶದಲ್ಲಿ ನೆಲೆಗೊಂಡಿರುವ ಶೀತಲ್ ನಾಥ್ ದೇವಾಲಯವನ್ನು ಉಗ್ರವಾದದ ಹಿನ್ನೆಲೆಯಲ್ಲಿ ಕಳೆದ 31 ವರ್ಷಗಳಿಂದ ಮುಚ್ಚಲಾಗಿತ್ತು. ದೇವಾಲಯವನ್ನು ಮುಚ್ಚಿದ ಬಳಿಕ ಇಲ್ಲಿನ ನೆಲೆಸಿದ್ದ ಹಿಂದೂ ಸಮುದಾಯದವರು ವಲಸೆ ಹೋದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ದೇವಾಲಯವನ್ನು ಮತ್ತೆ ತೆರೆಯಲು ಸ್ಥಳೀಯ ಮುಸ್ಲಿಂ ಸಮುದಾಯದವರಿಂದ ಬೆಂಬಲ, ಅಗತ್ಯ ಸಹಕಾರ ದೊರೆತಿದೆ ಎಂದು ವಿಶೇಷ ಪೂಜೆ ಸಲ್ಲಿಸಲು ಆಗಿಸಿದ್ದ ಭಕ್ತರೊಬ್ಬರು ತಿಳಿಸಿದ್ದಾರೆ.

ಮತ್ತೆ ದೇವಾಲಯವನ್ನು ತೆರೆಯಬೇಕು ಎಂಬುದು ಸ್ಥಳೀಯ ಮುಸ್ಲಿಂ ಸಮುದಾಯದವರ ಒತ್ತಾಸೆಯಾಗಿತ್ತು. ಅವರ ಸಂಪೂರ್ಣ ಬೆಂಬಲದೊಂದಿಗೆ ದೇವಾಲಯವನ್ನು ಮತ್ತೆ ತೆರೆಯಲಾಗಿತ್ತು ಇನ್ನು ಮುಂದೆ ನಿತ್ಯ ಪೂಜೆ ಜರುಗಲಿದೆ ಎಂದು ದೇವಾಲಯದ ಆಡಳಿತ ಮಂಡಳಿಯ ಸದಸ್ಯರಾದ ಸಂತೋಷ್‌ ರಾಜಧನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT