ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರಾಮುಲ್ಲಾ: ಉಗ್ರರ ನೇಮಕಾತಿ ಜಾಲ ಭೇದಿಸಿದ ಸೇನೆ

Last Updated 24 ಜನವರಿ 2023, 11:35 IST
ಅಕ್ಷರ ಗಾತ್ರ

ಶ್ರೀನಗರ: ಪಾಕಿಸ್ತಾನ ಮೂಲದ ಭಯೋತ್ಪಾದಕರು ಸಾಮಾಜಿಕ ಜಾಲತಾಣಗಳ ಮೂಲಕ ಜಮ್ಮು–ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆಸುತ್ತಿದ್ದ ಉಗ್ರ ನೇಮಕಾತಿ ಜಾಲವನ್ನು ಭದ್ರತಾ ಪಡೆಗಳು ಭೇದಿಸಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

‘ಇಬ್ಬರು ಬಾಲಕರು ಸೇರಿ ಐವರು ಯುವಕರನ್ನು ಭಯೋತ್ಪಾದಕರ ಕಪಿಮುಷ್ಟಿಯಿಂದ ರಕ್ಷಿಸಲಾಗಿದೆ. ಬಳಿಕ ಅವರೊಂದಿಗೆ ಆಪ್ತ ಸಮಾಲೋಚನೆ ನಡೆಸಿ, ಬಾರಾಮುಲ್ಲಾ ಜಿಲ್ಲೆಯ ಪಟ್ಟಣ್‌ ಪ್ರದೇಶದಲ್ಲಿರುವ ಅವರ ಪಾಲಕರಿಗೆ ಹಸ್ತಾಂತರಿಸಲಾಗಿದೆ’ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಮೋದ್ ನಾಗ್ಪುರೆ ತಿಳಿಸಿದ್ದಾರೆ.

‘ಉಗ್ರ ಸಂಘಟನೆ ಸೇರಿಕೊಳ್ಳುವಂತೆ ಯುವಕರಿಗೆ ಆಮಿಷ ಒಡ್ಡಲಾಗುತ್ತಿದೆ ಎಂಬ ಖಚಿತ ಮಾಹಿತಿ ವಿಶ್ವಾಸಾರ್ಹ ಮೂಲಗಳಿಂದ ಲಭ್ಯವಾಗಿತ್ತು. ಕೂಡಲೇ ಭದ್ರತಾ ಪಡೆಗಳು ಆ ಯುವಕರನ್ನು ಪತ್ತೆ ಹಚ್ಚಿ, ರಕ್ಷಿಸಿದವು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT