ಬುಧವಾರ, ಆಗಸ್ಟ್ 4, 2021
25 °C

ಕಾಂಗ್ರೆಸ್‌ನಲ್ಲಿ ಶಶಿ ತರೂರ್‌‌ ‘ಅತಿಥಿ ಕಲಾವಿದ’: ಕೋಡಿಕ್ಕುನ್ನಿಲ್‌ ಸುರೇಶ್‌

ಪಿಟಿಐ Updated:

ಅಕ್ಷರ ಗಾತ್ರ : | |

ಶಶಿ ತರೂರ್‌

ತಿರುವನಂತಪುರ: ನಾಯಕತ್ವಕ್ಕೆ ಸಂಬಂಧಿಸಿದಂತೆ ಬದಲಾವಣೆಗೆ ಆಗ್ರಹಿಸಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ 23 ಮುಖಂಡರ ಗುಂಪಿನಲ್ಲಿ ಇದ್ದ ಸಂಸದ ಶಶಿ ತರೂರ್‌ ವಿರುದ್ಧ ಕೇರಳ ರಾಜ್ಯ ಕಾಂಗ್ರೆಸ್‌ ನಾಯಕರೇ ಕಿಡಿಕಾರಲಾರಂಭಿಸಿದ್ದಾರೆ. 

‘ಪಕ್ಷದೊಳಗಿರುವ ಎಲ್ಲರೂ ಪಕ್ಷದ ನೀತಿ ನಿಯಮದಂತೆ ಕಾರ್ಯನಿರ್ವಹಿಸಬೇಕು. ಶಶಿ ತರೂರ್‌ ಖಂಡಿತವಾಗಿಯೂ ಒಬ್ಬ ರಾಜಕಾರಣಿ ಅಲ್ಲ. ಅವರು ಅತಿಥಿ ಕಲಾವಿದರಾಗಿ ಪಕ್ಷಕ್ಕೆ ಬಂದರು. ತರೂರ್‌ ಜಾಗತಿಕ ನಾಗರಿಕರಾಗಿರಬಹುದು. ಆದರೆ, ತನ್ನಿಚ್ಚೆಗೆ ತಕ್ಕಂತೆ ಏನೂ ಹೇಳಬಹುದು ಎಂದು ಯೋಚಿಸುವುದು ತಪ್ಪು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಲೋಕಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕ ಕೋಡಿಕ್ಕುನ್ನಿಲ್‌ ಸುರೇಶ್‌ ಶುಕ್ರವಾರ ಹೇಳಿದರು. 

ಸುರೇಶ್‌ ಹೇಳಿಕೆಗೆ ಕೆಲ ಹಿರಿಯ ಕಾಂಗ್ರೆಸ್‌ ನಾಯಕರು ವಿರೋಧ ವ್ಯಕ್ತಪಡಿಸಿದ್ದು, ತರೂರ್‌ ಅವರನ್ನು ತೆರೆಗೆ ಸರಿಸಲು ನಡೆಸಲಾಗುತ್ತಿರುವ ಪ್ರಯತ್ನ ಎಂದಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು