ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇರೆ ವ್ಯಕ್ತಿಯಿಂದ ಪರೀಕ್ಷೆ: ಜೆಇಇ (ಮೇನ್‌) ಟಾಪರ್‌ ಸೇರಿ ಐವರ ಬಂಧನ

Last Updated 28 ಅಕ್ಟೋಬರ್ 2020, 18:11 IST
ಅಕ್ಷರ ಗಾತ್ರ

ಗುವಾಹಟಿ: ತನ್ನ ಬದಲಾಗಿ ಬೇರೆ ಅಭ್ಯರ್ಥಿಯಿಂದ ಪರೀಕ್ಷೆ ಬರೆಸಿದ ಆರೋಪದ ಮೇಲೆ ಜೆಇಇ (ಮೇನ್‌) ಟಾಪರ್‌, ಆತನ ತಂದೆ ಹಾಗೂ ಇತರ ಮೂವರನ್ನು ಗುವಾಹಟಿ ಪೊಲೀಸರು ಬಂಧಿಸಿದ್ದಾರೆ.

ಟಾಪರ್ ನೀಲ್‌ ನಕ್ಷತ್ರ ದಾಸ್‌, ಆತನ ತಂದೆ ಡಾ.ಜ್ಯೋತಿರ್ಮಯ್ ದಾಸ್, ಪರೀಕ್ಷಾ ಕೇಂದ್ರದ ಸಿಬ್ಬಂದಿಯಾದ ಹೇಮೇಂದ್ರನಾಥ್‌ ಶರ್ಮಾ, ಪ್ರಾಂಜಲ್‌ ಕಲಿಟಾ ಹಾಗೂ ಹೀರುಲಾಲ್‌ ಪಾಠಕ್‌ ಬಂಧಿತರು ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಬಂಧಿತ ನೀಲ್‌ ನಕ್ಷತ್ರ ದಾಸ್‌ ಜೆಇಇ (ಮೇನ್‌)ಯಲ್ಲಿ ಶೇ 99.8 ಅಂಕ ಗಳಿಸಿದ್ದಾರೆ.

‘ಬೇರೆ ವ್ಯಕ್ತಿಯಿಂದ ಪರೀಕ್ಷೆ ಬರೆಸಿ, ಗರಿಷ್ಠ ಅಂಕ ಗಳಿಸಿದ್ದರ ಕುರಿತು ವಾಟ್ಸ್‌ ಆ್ಯಪ್‌ ಚಾಟ್‌ಗಳ ಸ್ಕ್ರೀನ್‌ ಶಾಟ್‌ಗಳು, ಸಂಭಾಷಣೆಯ ಧ್ವನಿ ಮುದ್ರಣಗಳ ಸಮೇತ ಮಿತ್ರದೇವ್ ಶರ್ಮಾ ಎಂಬುವವರು ಕಳೆದ ವಾರ ದೂರು ದಾಖಲಿಸಿದ್ದರು’ ಎಂದು ಗುವಾಹಟಿ ಪೊಲೀಸ್‌ ಕಮಿಷನರ್‌ ಎಂ.ಪಿ.ಗುಪ್ತಾ ಹೇಳಿಕೆಯನ್ನೂ ಎನ್‌ಡಿಟಿವಿ ಉಲ್ಲೇಖಿಸಿದೆ.

‘ಈ ಪ್ರಕರಣದಲ್ಲಿ ಹಲವು ಮಂದಿ ಭಾಗಿಯಾಗಿರುವ ಶಂಕೆ ಇದೆ. ಬೇರೆ ವ್ಯಕ್ತಿಯಿಂದ ಪರೀಕ್ಷೆ ಬರೆಸುವ ದೊಡ್ಡ ಜಾಲವೇ ಸಕ್ರಿಯವಾಗಿದೆ ಎಂಬ ಅನುಮಾನ ಇದ್ದು, ತನಿಖೆ ಆರಂಭಿಸಿದ್ದೇವೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT