ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಪುರ: 5 ಸ್ಟಾರ್‌ ಹೋಟೆಲ್‌ನಲ್ಲಿ ಕಳ್ಳತನ, ₹2 ಕೋಟಿ ಮೌಲ್ಯದ ವಜ್ರಾಭರಣ ಕಳವು

Last Updated 27 ನವೆಂಬರ್ 2021, 6:24 IST
ಅಕ್ಷರ ಗಾತ್ರ

ಜೈಪುರ: ಸುಮಾರು ₹2 ಕೋಟಿ ಮೌಲ್ಯದ ಆಭರಣಗಳು ಮತ್ತು ₹95,000 ನಗದು ಜೈಪುರದ ಐಷಾರಾಮಿ 5 ಸ್ಟಾರ್‌ ಹೋಟೆಲ್‌ನಲ್ಲಿ ಕಳ್ಳತನವಾಗಿದೆ. ಮದುವೆಯೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅತಿಥಿಗಳು 'ಹೋಟೆಲ್‌ ಕ್ಲಾರ್ಕ್ಸ್‌ ಅಮಿರ್‌'ನಲ್ಲಿ ಉಳಿದುಕೊಂಡಿದ್ದರು. ಇವರಿಗೆ ಸೇರಿದ ಆಭರಣ ಮತ್ತು ನಗದು ಗುರುವಾರ ಕಳ್ಳತನವಾಗಿದೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.

ಮುಂಬೈ ಮೂಲದ ಉದ್ಯಮಿ ರಾಹುಲ್‌ ಭಾಟಿಯಾ ಅವರ ಮಗಳ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿಗಳು 5 ಸ್ಟಾರ್‌ ಹೋಟೆಲ್‌ನಲ್ಲಿ ತಂಗಿದ್ದರು. ಭಾಟಿಯಾ ಮತ್ತು ಕುಟುಂಬ ಸದಸ್ಯರು ಉಳಿದುಕೊಂಡಿದ್ದ ಹೋಟೆಲ್‌ನ 7ನೇ ಮಹಡಿಯ ಕೊಠಡಿಯೊಂದರಲ್ಲಿ ಸುಮಾರು ₹2 ಕೋಟಿ ಮೌಲ್ಯದ ವಜ್ರಾಭರಣ ಮತ್ತು ₹95,000 ನಗದು ಕಳುವಾಗಿದೆ ಎಂದು ಪಿಟಿಐಗೆ ಎಸ್ಎಚ್‌ಒ ಜವಾಹರ್‌ ಸರ್ಕಲ್‌ ರಾಧಾರಮಣ ಗುಪ್ತಾ ಹೇಳಿದ್ದಾರೆ.

ದೂರಿನಲ್ಲಿ ಹೋಟೆಲ್‌ ಸಿಬ್ಬಂದಿಯ ನೆರವಿನಿಂದ ಕಳ್ಳತನ ಸಂಭವಿಸಿದೆ ಎಂದು ರಾಹುಲ್‌ ಭಾಟಿಯಾ ಆರೋಪಿಸಿರುವುದಾಗಿ ರಾಧಾರಮಣ ಗುಪ್ತಾ ತಿಳಿಸಿದ್ದಾರೆ.

ಸಿಸಿಟಿವಿ ಫೂಟೇಜ್‌ ಪಡೆಯಲಾಗಿದ್ದು ಹೋಟೆಲ್‌ ನಿರ್ವಹಣಾ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಇದುವರೆಗೆ ಹೋಟೆಲ್‌ನಿಂದ ಯಾವುದೇ ಹೇಳಿಕೆ ಬಿಡುಗಡೆಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT