ತಿರುಮಲದಲ್ಲಿ ಡ್ರೋನ್‌ಗಳ ಚಲನವಲನ: ವಾಯುಪ್ರದೇಶ ಕಣ್ಗಾವಲಿಗೆ ನಿರ್ಧಾರ

ಹೈದರಾಬಾದ್: ತಿರುಮಲದಲ್ಲಿ ಡ್ರೋನ್‌ಗಳ ಚಲನವಲನದ ತ್ವರಿತ ಪತ್ತೆಗಾಗಿ ಡ್ರೋನ್ ನಿರೋಧಕ ವ್ಯವಸ್ಥೆ (ಎನ್ಎಡಿಎಸ್) ಅಳವಡಿಸಿಕೊಳ್ಳಲು ತಿರುಮಲ ತಿರುಪತಿ ದೇವಸ್ಥಾನ ಆಡಳಿತದ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಡ್ರೋನ್ ಬಳಸಿ ಚಿತ್ರಿಸಲಾಗಿದ್ದ ದೇವಸ್ಥಾನದ ಪಕ್ಷಿನೋಟದ ದೃಶ್ಯಗಳು ಕಳೆದ ವಾರ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದವರು. ಇದರ ಹಿಂದೆಯೇ ಜಾಗೃತಗೊಂಡಿರುವ ಅಧಿಕಾರಿಗಳು ಈ ಬಗ್ಗೆ ಚಿಂತನೆ ನಡೆಸಿದ್ದಾರೆ.
ಎನ್‌ಎಡಿಎಸ್ ಸೌಲಭ್ಯ ಪಡೆಯುವ ನಿಟ್ಟಿನಲ್ಲಿ ಭಾರತ್ ಎಲೆಕ್ಟ್ರಾನಿಕ್ಸ್ (ಬಿಇಎಲ್) ಜೊತೆಗೆ ಮಾತುಕತೆ ನಡೆದಿದೆ ಎಂದು ಟಿಟಿಡಿ ಆಡಳಿತ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿ ಧರ್ಮ ರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.