ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಮಲ: ಅಕ್ಟೋಬರ್‌ 7 ರಿಂದ ತಿರುಪತಿ ವಾರ್ಷಿಕ ಬ್ರಹ್ಮೋತ್ಸವ

Last Updated 21 ಸೆಪ್ಟೆಂಬರ್ 2021, 22:35 IST
ಅಕ್ಷರ ಗಾತ್ರ

ಹೈದರಾಬಾದ್‌: ತಿರುಮಲದಲ್ಲಿ ಅ. 7ರಿಂದ ವೆಂಕಟೇಶ್ವರ ಸ್ವಾಮಿಯ ವಾರ್ಷಿಕ ಬ್ರಹ್ಮೋತ್ಸವಗಳು ಆರಂಭವಾಗಲಿವೆ.

9 ದಿನಗಳ ಆರಂಭವನ್ನು ಸೂಚಿಸುವ ಧ್ವಜಾರೋಹಣವು ಅಕ್ಟೋಬರ್‌ 7, ಗರುಡ ಸೇವೆ ಅಕ್ಟೋಬರ್‌ 11, ಚಿನ್ನದ ರಥ ಸೇವೆ ಅಕ್ಟೋಬರ್‌ 12, ರಥೋತ್ಸವ ಅಕ್ಟೋಬರ್‌ 14 ಮತ್ತು ಅಂತಿಮವಾಗಿ ಚಕ್ರಸ್ನಾನ ಹಾಗೂ ಧ್ವಜಾರೋಹಣ ಅ.15 ರಂದು ನೆರವೇರಲಿದೆ ಎಂದು ಟಿಟಿಡಿ ಅಧಿಕಾರಿಗಳು ಹೇಳಿದ್ದಾರೆ.

ಆಂಧ್ರಪ್ರದೇಶದ ವಿವಿಧ ಸ್ಥಳಗಳಿಂದ ದುರ್ಬಲ ವರ್ಗಗಳಿಗೆ ಸೇರಿದ ಭಕ್ತರಿಗೆ ವಾರ್ಷಿಕ ಬ್ರಹ್ಮೋತ್ಸವದ ಸಮಯದಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗುವುದು. ದಿನಕ್ಕೆ 1000 ಜನರ ಮಿತಿ ನಿಗದಿಪಡಿಸಲಾಗಿದೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಜವಾಹರ್‌ ರೆಡ್ಡಿ ಮಂಗಳವಾರ ಹೇಳಿದರು.

ಕೋವಿಡ್‌ ಹಿನ್ನೆಲೆ ಈ ವರ್ಷವೂ ಸ್ವರ್ಗೀಯ ಕಾರ್ಯಕ್ರಮವನ್ನು ಏಕಾಂತದಲ್ಲಿ ನಡೆಸಲಾಗುವುದು ಎಂದು ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಕಳೆದ ವಾರ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT