ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಖಿಲ ಭಾರತ ಪರ್ಮಿಟ್‌ಗೆ ಆನ್‌ಲೈನ್‌ನಲ್ಲಿಯೇ ಅರ್ಜಿ: ಏ.1ರಿಂದ ನೂತನ ಯೋಜನೆ

Last Updated 14 ಮಾರ್ಚ್ 2021, 15:34 IST
ಅಕ್ಷರ ಗಾತ್ರ

ನವದೆಹಲಿ: ಪ್ರವಾಸಿ ವಾಹನಗಳ ಆಪರೇಟರ್‌ಗಳು ಈಗ ಅಖಿಲ ಭಾರತ ಸಂಚಾರ ಕುರಿತು ಪರ್ಮಿಟ್‌ಗಾಗಿ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ. ಈ ಸಂಬಂಧ ಕೇಂದ್ರ ಹೆದ್ದಾರಿಗಳ ಮತ್ತು ಸಾರಿಗೆ ಸಚಿವಾಲಯವು ನೂತನ ಯೋಜನೆ ಪ್ರಕಟಿಸಿದೆ.

ಈ ಯೋಜನೆ ಏಪ್ರಿಲ್‌ 1ರಿಂದ ಜಾರಿಗೆ ಬರಲಿದ್ದು, ಪರ್ಮಿಟ್‌ ಅನ್ನು ಅರ್ಜಿ ಸಲ್ಲಿಸಿದ 30 ದಿನದಲ್ಲಿ ನೀಡಲಾಗುತ್ತದೆ. ಪರ್ಮಿಟ್‌ ಅನ್ನು ಮೂರು ತಿಂಗಳಿನಿಂದ ಗರಿಷ್ಠ 3 ವರ್ಷದವರೆಗೂ ನೀಡಲಾಗುತ್ತದೆ.

ಈ ವೇಳೆಯಲ್ಲಿ ಹಾಲಿ ಹೊಂದಿರುವ ಪರ್ಮಿಟ್‌ ಕೂಡಾ ಕಾರ್ಯಾವಧಿ ಹೊಂದಿರುತ್ತದೆ. ಪರ್ಮಿಟ್‌ ಕುರಿತು ನೂತನ ನಿಯಮಗಳು ದೀರ್ಘಾವಧಿಯಲ್ಲಿ ವಿವಿಧ ರಾಜ್ಯಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲಿವೆ. ಜೊತೆಗೆ ರಾಜ್ಯಗಳ ಆದಾಯ ವೃದ್ಧಿಗೂ ನೆರವಾಗಲಿದೆ ಎಂದು ಸಚಿವಾಲಯ ಪ್ರತಿಪಾದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT