ಊಟಿಯಲ್ಲಿ ಪ್ರವಾಸಿಗರನ್ನು ರಾತ್ರಿ ಸಫಾರಿಗೆ ಕರೆದೊಯ್ದ ಇಬ್ಬರ ಬಂಧನ

ಉದಕಮಂಡಲ (ಊಟಿ): ತಮಿಳುನಾಡಿನ ನೀಲಗಿರಿ ಜಿಲ್ಲೆಯ ಸಿಂಗಾರ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಇಬ್ಬರು ಪ್ರವಾಸಿಗರನ್ನು ಅಕ್ರಮವಾಗಿ ರಾತ್ರಿ ಸಫಾರಿಗೆ ಕರೆದೊಯ್ದ ಆರೋಪದ ಮೇರೆಗೆ ಜೀಪ್ನ ಮಾಲೀಕ ಮತ್ತು ಚಾಲಕನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಬಂಧಿತರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೊಯಮತ್ತೂರಿನವರಾದ ಪ್ರವಾಸಿಗರು ರಾತ್ರಿ ಸಫಾರಿಗಾಗಿ ವಾಹನ ಮಾಲೀಕ ಮತ್ತು ಚಾಲಕನಿಗೆ ತಲಾ ₹ 5 ಸಾವಿರ ನೀಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.