ತ್ರಿಪುರದಲ್ಲಿ ಶೀಘ್ರವೇ ಸಂಚಾರಿ ಪಶು ವೈದ್ಯಕೀಯ ಸೇವೆ

ಅಗರ್ತಲಾ: ಸಾಕುಪ್ರಾಣಿಗಳ ಚಿಕಿತ್ಸೆಗೆ ಅನುಕೂಲವಾಗುವಂತೆ ತ್ರಿಪುರ ಸರ್ಕಾರ ಸಂಚಾರಿ ಪಶು ವೈದ್ಯಕೀಯ ಸೇವೆ ಆರಂಭಿಸಲಿದೆ ಎಂದು ಸಚಿವರೊಬ್ಬರು ತಿಳಿಸಿದ್ದಾರೆ.
ಪಶು ಸಂಪನ್ಮೂಲ ಅಭಿವೃದ್ಧಿ ಸಚಿವ ಭಗಬನ್ ದಾಸ್ ಅವರು, 'ಶಸ್ತ್ರಚಿಕಿತ್ಸೆ ಸೌಲಭ್ಯ, ಪ್ರಯೋಗಶಾಲೆ ಮತ್ತು ವೈದ್ಯರನ್ನೂ ಒಳಗೊಂಡ 12 ವ್ಯಾನ್ಗಳು ಸಜ್ಜಾಗಿದ್ದು, ಹಸು, ಮೇಕೆ, ಹಂದಿಗಳಿಗೆ ಚಿಕಿತ್ಸೆ ನೀಡಲಾಗುವುದು' ಎಂದು ಹೇಳಿದ್ದಾರೆ.
ಮುಂದುವರಿದು, 'ರಾಜ್ಯಮಟ್ಟದ ಸಹಾಯವಾಣಿ ಸಂಖ್ಯೆ ತೆರೆಯಲಾಗುವುದು. ಪ್ರಾಣಿಯ ಮಾಲೀಕರಿಂದ ಕರೆ ಸ್ವೀಕರಿಸಿದ ಕೇವಲ 20 ನಿಮಿಷಗಳಲ್ಲೇ ಸಹಾಯ ಲಭ್ಯವಾಗಲಿದೆ' ಎಂದೂ ತಿಳಿಸಿದ್ದಾರೆ.
ತಾವೂ ರೈತಪಿ ಕುಟುಂಬದವರಾಗಿದ್ದು, ಅನಾರೋಗ್ಯಕ್ಕೀಡಾದ ಪ್ರಾಣಿಗಳಿಗೆ ಸರಿಯಾದ ಚಿಕಿತ್ಸೆ ಕೊಡಿಸಲಾಗದೆ ಮಾರಾಟ ಮಾಡುತ್ತಿದ್ದುದಾಗಿ ಬೇಸರ ವ್ಯಕ್ತಪಡಿಸಿರುವ ದಾಸ್, ‘ಅದೇರೀತಿಯ ಅನುಭವ ಜಾನುವಾರು ಸಾಕುವವರಿಗೆ ಆಗುವುದು ನನಗೆ ಇಷ್ಟವಿಲ್ಲ. ಸಂಚಾರಿ ಪಶು ಆರೋಗ್ಯ ಸೇವೆಯಿಂದ ಗ್ರಾಮೀಣ ಪ್ರದೇಶದಲ್ಲಿರುವ ಪ್ರಾಣಿಗಳ ಚಿಕಿತ್ಸೆಗೆ ನೆರವಾಗಲಿದೆ ಎಂಬ ಭರವಸೆ ಇದೆ' ಎಂದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.