ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರಾಭ್ಯಾಸ: ಗುವಾಮ್‌ ದ್ವೀಪ ತಲುಪಿದ ಭಾರತದ ಎರಡು ಯುದ್ಧನೌಕೆಗಳು

Last Updated 22 ಆಗಸ್ಟ್ 2021, 15:10 IST
ಅಕ್ಷರ ಗಾತ್ರ

ನವದೆಹಲಿ: ಆ. 26ರಿಂದ 29ರ ವರಗೆ ಕ್ವಾಡ್‌ ರಾಷ್ಟ್ರಗಳು ನಡೆಸುವ ‘ಮಲಬಾರ್‌ ಸಮರಾಭ್ಯಾಸ’ದಲ್ಲಿ ಪಾಲ್ಗೊಳ್ಳಲು ಭಾರತದ ಎರಡು ಯುದ್ಧನೌಕೆಗಳು ಗುವಾಮ್‌ ದ್ವೀಪವನ್ನು ತಲುಪಿವೆ.

ಐಎನ್‌ಎಸ್‌ ಶಿವಾಲಿಕ್‌ ಹಾಗೂ ಐಎನ್‌ಎಸ್‌ ಕದಮತ್‌ ಯುದ್ಧನೌಕೆಗಳು ಸಂಕೀರ್ಣವಾದ ತಾಲೀಮಿನಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲಿವೆ ಎಂದು ಭಾರತೀಯ ನೌಕಾಪಡೆ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಪೆಸಿಫಿಕ್‌ ಸಾಗರದಲ್ಲಿರುವ ಈ ದ್ವೀಪ ಅಮೆರಿಕದ ಆಡಳಿತಕ್ಕೆ ಒಳಪಟ್ಟಿದೆ. ಇಲ್ಲಿ ನಡೆಯುವ ಸಮರಾಭ್ಯಾಸದಲ್ಲಿ ಕ್ವಾಡ್‌ ರಾಷ್ಟ್ರಗಳಾದ ಭಾರತ, ಅಮೆರಿಕ, ಆಸ್ಟ್ರೇಲಿಯಾ ಹಾಗೂ ಜಪಾನ್‌ನ ನೌಕಾಪಡೆಗಳು ಪಾಲ್ಗೊಳ್ಳಲಿವೆ.

ಇಂಡೊ–ಪೆಸಿಫಿಕ್‌ ಪ್ರದೇಶದಲ್ಲಿ ಚೀನಾ ತನ್ನ ಮಿಲಿಟರಿ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಕ್ವಾಡ್‌ ರಾಷ್ಟ್ರಗಳು ಈ ಸಮರಾಭ್ಯಾಸ ಆಯೋಜಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT