ಗುರುವಾರ , ಜೂನ್ 30, 2022
21 °C

ತಮಿಳುನಾಡು: ಎರಡು ಸಿಂಹಿಣಿಗಳಲ್ಲಿ ಕೋವಿಡ್‌ ಸೋಂಕು ಪತ್ತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬರೇಲಿ(ಉತ್ತರ ಪ್ರದೇಶ): ‘ತಮಿಳುನಾಡಿನ ಅರಿನಗರ ಅಣ್ಣ ಜೈವಿಕ ಉದ್ಯಾನದಲ್ಲಿ ಎರಡು ಸಿಂಹಿಣಿಗಳಿಗೆ ಕೋವಿಡ್‌ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದೇ ವೇಳೆ ಸಿಂಹವೊಂದರಲ್ಲಿ ಡಿಸ್ಟೆಂಪರ್ ವೈರಸ್‌ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ’ ಎಂದು ಉತ್ತರ ಪ್ರದೇಶದಲ್ಲಿರುವ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ (ಐವಿಆರ್‌ಐ) ಗುರುವಾರ ತಿಳಿಸಿದೆ. 

‘ಈ ಜೈವಿಕ ಉದ್ಯಾನದಿಂದ ನಾಲ್ಕು ಹುಲಿಗಳ ಮಾದರಿ ಸೇರಿದಂತೆ ಒಟ್ಟು ಏಳು ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಇದರಲ್ಲಿ ಒಂದು ಸಿಂಹಿಣಿಯಲ್ಲಿ ಕೋವಿಡ್‌ ಮತ್ತು ಡಿಸ್ಟೆಂಬರ್‌ ವೈರಸ್‌ ಪತ್ತೆಯಾಗಿದೆ’ ಎಂದು ತಿಳಿಸಿದೆ.

‘ಇನ್ನೊಂದು ಸಿಂಹಣಿಯಲ್ಲಿ ಕೋವಿಡ್‌ ದೃಢಪಟ್ಟಿದೆ. ಮತ್ತೊಂದು ಸಿಂಹವು ಡಿಸ್ಟೆಂಬರ್‌ ವೈರಸ್‌ಗೆ ತುತ್ತಾಗಿದೆ. ಆದರೆ ನಾಲ್ಕು ಹುಲಿಗಳಿಗೆ ಯಾವುದೇ ಸೋಂಕು ತಗುಲಿಲ್ಲ’ ಎಂದು ಐವಿಆರ್‌ವಿ ಜಂಟಿ ನಿರ್ದೇಶಕ ಕೆ.ಪಿ ಸಿಂಗ್‌ ಅವರು ಮಾಹಿತಿ ನೀಡಿದರು.

ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು