ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು–ಕಾಶ್ಮೀರ: ಉಗ್ರರ ಇಬ್ಬರು ಸಹಚರರ ಬಂಧನ

Last Updated 20 ಫೆಬ್ರುವರಿ 2021, 8:02 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು–ಕಾಶ್ಮೀರದ ಬಂಡಿಪೊರ ಜಿಲ್ಲೆಯಲ್ಲಿ ಭದ್ರತಾ ಪಡೆಗಳುಲಷ್ಕರ್‌ ಎ ತಯಬಾ ಸಂಘಟನೆಗೆ ಸೇರಿದ ಉಗ್ರರ ಇಬ್ಬರು ಸಹಚರರನ್ನು ಬಂಧಿಸಲಾಗಿದೆ.

ಬಂಧಿತರಿಂದ, ಅಪರಾಧ ಕೃತ್ಯಕ್ಕೆ ಬಳಸುವಂತಹ ಕೆಲವೊಂದು ವಸ್ತುಗಳನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ.

‘ಉಗ್ರರ ಇರುವಿಕೆಯನ್ನು ಅರಿತ ಭದ್ರತಾ ಪಡೆ ಪಾಪಚನ್-ಬಂಡಿಪೊರ ಸೇತುವೆಯ ಬಳಿ ಶುಕ್ರವಾರ ಚೆಕ್‌ಪಾಯಿಂಟ್‌ ಅನ್ನು ಸ್ಥಾಪಿಸಿದ್ದರು. ಈ ವೇಳೆ ಉಗ್ರರ ಇಬ್ಬರು ಸಹಚರರು ಸಿಕ್ಕಿಬಿದ್ದಿದ್ದಾರೆ’ ಎಂದು ಅವರು ಹೇಳಿದರು.

‘ಬಂಧಿತರನ್ನು ಬಂಡಿಪೊರದ ನಿವಾಸಿ ಅಬಿದ್‌ ವಾಝಾ ಮತ್ತು ಬಶೀರ್‌ ಅಹಮದ್ ಗೊಜೆರ್‌ ಎಂದು ಗುರುತಿಸಲಾಗಿದೆ. ಇವರು ಆ ಪ್ರದೇಶದಲ್ಲಿ ಸಕ್ರಿಯರಾಗಿರುವ ಉಗ್ರರಿಗೆ ಆಶ್ರಯ ಮತ್ತು ಅವರ ಕಾರ್ಯಾಚರಣೆಗಳಿಗೆ ಬೇಕಾಗಿರುವ ವಸ್ತುಗಳನ್ನು ಪೂರೈಸುತ್ತಿದ್ದರು’ ಎಂದು ಅವರು ಮಾಹಿತಿ ನೀಡಿದರು.

‘ಅಲ್ಲದೆ ಈ ಇಬ್ಬರು ಸಹಚರರಿಗೆ ಬಂಡಿಪೊರದಲ್ಲಿ ಭದ್ರತಾ ಪಡೆಯ ಮೇಲೆ ಗ್ರನೇಡ್‌ ದಾಳಿ ನಡೆಸಲು ಉಗ್ರರು ಸೂಚಿಸಿದ್ದರು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT