ಗುರುವಾರ , ಅಕ್ಟೋಬರ್ 29, 2020
28 °C

ಶಸ್ತ್ರಾಸ್ರಗಳೊಂದಿಗೆ ಇಬ್ಬರು ಭದ್ರತಾ ಪಡೆ ಸಿಬ್ಬಂದಿ ನಾಪತ್ತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಎಸ್‌ಎಸ್‌ಬಿ ಯೋಧ ಸೇರಿದಂತೆ ಇಬ್ಬರು ಭದ್ರತಾ ಪಡೆಯ ಸಿಬ್ಬಂದಿ ಜಮ್ಮು ಮತ್ತು ಕಾಶ್ಮೀರದ ಬುಡ್ಗಂ ಜಿಲ್ಲೆಯ ಚಾಡೂರಾ ಹಾಗೂ ನಗಮ್‌ ಪ್ರದೇಶದ ಶಿಬಿರದಿಂದ ಕೆಲವು ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳೊಂದಿಗೆ ನಾಪತ್ತೆಯಾಗಿದ್ದಾರೆ.

ನಾಪತ್ತೆಯಾಗಿರುವವರಲ್ಲಿ ಚಾಡೂರಾದಲ್ಲಿ ನಡೆಯುತ್ತಿರುವ ವಿಶೇಷ ಕಾರ್ಯಾಚರಣೆ ಶಿಬಿರದ ವಿಶೇಷ ಪೊಲೀಸ್ ಅಧಿಕಾರಿ ಅಲ್ತಾಫ್ ಹುಸೇನ್ ಕೂಡ ಒಬ್ಬರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಪತ್ತೆಯಾದ ಈ ಅಧಿಕಾರಿಯ ಜೊತೆಗೆ, ಎಕೆ ರೈಫಲ್ಸ್‌ ಮತ್ತು ಮೂರು ಮ್ಯಾಗಜಿನ್ಸ್‌ ಕೂಡ ಶಿಬಿರದಿಂದ ನಾಪತ್ತೆಯಾಗಿವೆ. ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದು ಘಟನೆಯಲ್ಲಿ ನಗಮ್‌ ಶಿಬಿರದಿಂದ ಎಸ್‌ಎಸ್‌ಬಿ ಕಾನ್‌ಸ್ಟೇಬಲ್‌ ಒಬ್ಬರು ನಾಪತ್ತೆಯಾಗಿದ್ದು, ಅವರ ಹೆಸರು ಕೂಡ ಅಲ್ತಾಫ್ ಹುಸ್ಸೇನ್‌. ಅವರೊಂದಿಗೆ ಐಎನ್‌ಎಸ್‌ಎಸ್‌ ರೈಫಲ್‌ನ ಒಂದು ಮ್ಯಾಗಜಿನ್‌ ನಾಪತ್ತೆಯಾಗಿವೆ. 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು