ಸೋಮವಾರ, ಸೆಪ್ಟೆಂಬರ್ 27, 2021
22 °C

ಕೆನ್ನೆಗೆ ಹೊಡೆದರೆ ನೆಲಕಚ್ಚುವಂತೆ ತಿರುಗಿಸಿ ಬಾರಿಸುತ್ತೇವೆ: ಬಿಜೆಪಿಗೆ ಉದ್ಧವ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ (ಪಿಟಿಐ): ‘ಬೆದರಿಕೆಯ ಮಾತುಗಳನ್ನು ನಾವು ಎಂದಿಗೂ ಸಹಿಸುವುದಿಲ್ಲ. ಅದಕ್ಕೆ ತಕ್ಕುದಾದ ರೀತಿಯಲ್ಲಿಯೇ ಪ್ರತ್ಯುತ್ತರ ಕೊಡುತ್ತೇವೆ’ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಹೇಳಿದ್ದಾರೆ.

ಅಗತ್ಯ ಬಿದ್ದರೆ ಮುಂಬೈ ಸೆಂಟ್ರಲ್‌ನಲ್ಲಿ ಇರುವ ಶಿವಸೇನಾದ ಕೇಂದ್ರ ಕಚೇರಿ ಸೇನಾ ಭವನ್‌‌ಅನ್ನೂ ಕೆಡವಲಾಗುವುದು ಎಂಬ ಬಿಜೆಪಿ ಶಾಸಕ ಪ್ರಸಾದ್ ಲಾಡ್ ಅವರ ಹೇಳಿಕೆಗೆ ಅವರು ಕಠಿಣವಾಗಿ ಪ್ರತಿಕ್ರಿಯಿಸಿದ್ದಾರೆ.

‘ದಬಾಂಗ್’ ಚಿತ್ರದ ‘ತಪ್ಪಡ್‌ ಸೇ ಡರ್ ನಹೀ ಲಗ್ತಾ’ ಎಂಬ ಸಂಭಾಷಣೆ ಉಲ್ಲೇಖಿಸಿರುವ ಅವರು, ‘ಕಪಾಲಕ್ಕೆ ಹೊಡೆದರೆ ನಾವು ಹೆದರುವುದಿಲ್ಲ. ಹೊಡೆದವರು ನೆಲಕಚ್ಚುವಂತೆ ಪ್ರತಿಯಾಗಿ ಕಪಾಲಕ್ಕೆ ಬಾರಿಸುತ್ತೇವೆ’ ಎಂದು ಹೇಳಿದ್ದಾರೆ.

ವಸತಿ ಪುನರ್ವಸತಿ ಯೋಜನೆಗಳ ಸಂದರ್ಭದಲ್ಲಿ ಮರಾಠಿ ಸಂಸ್ಕೃತಿಯನ್ನು ರಕ್ಷಿಸಬೇಕು. ಮರಾಠಿ ಸಂಸ್ಕೃತಿಯ ಇತಿಹಾಸದಲ್ಲಿ ಸಂಯುಕ್ತ ಮಹಾರಾಷ್ಟ್ರ ಆಂದೋಲನದಲ್ಲಿ ಹೋರಾಡಿದವರ ಹೆಜ್ಜೆಗಳಿವೆ’ ಎಂದರು.

ಮರಾಠಿ ಸಂಸ್ಕೃತಿ ಉಳಿಸಬೇಕು, ಚಾಳ್‌ಗಳಲ್ಲಿ (ವಸತಿ ಸಂಕೀರ್ಣ) ವಾಸವಿರುವ ಮರಾಠಿಗರಿಗೆ, ಮರು ನಿರ್ಮಾಣ ಮಾಡಿದ ವಸತಿಗಳಲ್ಲಿ ವಾಸವಿರಲು ಅವಕಾಶ ಇರಬೇಕು ಎಂದು ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್ ಅವರೂ ದನಿಗೂಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು