ನವದೆಹಲಿ:ಕೇಂದ್ರ ಗೃಹ ಸಚಿವಾಲಯವು ಶನಿವಾರ ನಾಲ್ಕನೇ ಹಂತದ (ಅನ್ಲಾಕ್–4) ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು ಮೆಟ್ರೊ ರೈಲು ಸೇವೆಯನ್ನು ಹಂತ ಹಂತವಾಗಿ ಆರಂಭಿಸಲು ಅನುಮತಿ ನೀಡಿದೆ.

ಅನ್ಲಾಕ್-4 ಮಾರ್ಗಸೂಚಿಯು ಸೆಪ್ಟೆಂಬರ್ 1 ರಿಂದ 30ರವರೆಗೆ ಇದು ಅನ್ವಯವಾಗಲಿದೆ.

ಮೆಟ್ರೊ ರೈಲು ಸೇವೆಯನ್ನುಸೆಪ್ಟೆಂಬರ್ 7ರಿಂದ ಹಂತ ಹಂತವಾಗಿ ಆರಂಭಿಸಬಹುದು ಆದರೆಸೆಪ್ಬೆಂಬರ್ ಅಂತ್ಯದವರೆಗೂ ಶಾಲಾ, ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಪ್ರಮುಖಾಂಶಗಳು...

* ಸೆಪ್ಟೆಂಬರ್ 21ರಿಂದ ಬಯಲು ರಂಗ ಮಂದಿರಗಳನ್ನು ಆರಂಭಿಸಬಹುದು

*ಆನ್ಲೈನ್ ತರಗತಿಗಳನ್ನು ನಡೆಸಲು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳಿಗೆ ಅನುಮತಿ. ಶೇ. 50ರಷ್ಟು ಸಿಬ್ಬಂದಿಗೆ ಶಾಲಾ-ಕಾಲೇಜುಗಳಲ್ಲಿ ಅವಕಾಶ

* ಸಾಮಾಜಿಕ, ಶೈಕ್ಷಣಿಕ, ಕ್ರೀಡೆ, ಮನರಂಜನೆ, ಸಾಂಸ್ಕೃತಿಕ, ಧಾರ್ಮಿಕ ಮತ್ತು ರಾಜಕೀಯ ಕಾರ್ಯಕ್ರಮಗಳಲ್ಲಿ 100 ಜನರವರೆಗೆ ಸೇರಲು ಅನುಮತಿ ನೀಡಲಾಗಿದೆ. ಸೆಪ್ಟೆಂಬರ್ 21ರಿಂದ ಇದು ಅನ್ವಯವಾಗಲಿದೆ.

* ಸೆಪ್ಟೆಂಬರ್ 30ರವರೆಗೂ ಕಂಟೈನ್ಮೆಂಟ್ ಝೋನ್ಗಳಲ್ಲಿ ಕಠಿಣ ಲಾಕ್ಡೌನ್ ಮುಂದುವರಿಯಲಿದೆ.

* ಚಿತ್ರಮಂದಿರ, ಈಜುಕೊಳಗಳು, ಆಡಿಟೋರಿಯಂ ಹಾಗೂ ಬಾರ್ಗಳನ್ನು ತೆರೆಯಲು ಅನುಮತಿ ಕೊಟ್ಟಿಲ್ಲ

* ಶಾಲೆ, ಕಾಲೇಜು, ಕೋಚಿಂಗ್ ಕೇಂದ್ರಗಳನ್ನು ತೆರೆಯಲು ಸೆಪ್ಟೆಂಬರ್ 30ರವರೆಗೆ ಅನುಮತಿ ಇಲ್ಲ.

* ಈಗಿರುವಂತೆಯೇ ಅಂತರರಾಜ್ಯ ಪ್ರಯಾಣಕ್ಕೆ - ಸರಕು ಹಾಗೂ ಮನುಷ್ಯರು - ಯಾವುದೇ ನಿರ್ಬಂಧವಿಲ್ಲ.

* ಸಿನಿಮಾ ಮಂದಿರ, ಈಜುಕೊಳ, ಮನರಂಜನಾ ಪಾರ್ಕ್ಗಳು, ಒಳಾಂಗಣ ರಂಗಮಂದಿರಗಳು, ಅಂತಾರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ ಅವಕಾಶವಿಲ್ಲ.

* 65 ವರ್ಷ ಮೀರಿದ ಹಿರಿಯ ನಾಗರಿಕರು, ಗರ್ಭಿಣಿಯರು, 10 ವರ್ಷದೊಳಗಿನ ಮಕ್ಕಳು, ದೀರ್ಘಕಾಲಿನ ರೋಗಗಳಿಂದ ಬಳಲುತ್ತಿರುವವರು ಮನೆಯಲ್ಲಿ ಇರಲು ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.