ಬಂದಾ/ಫತೇಪುರ್:ಉತ್ತರಪ್ರದೇಶದ ಬಂದಾ ಜಿಲ್ಲೆಯ ಯಮುನಾ ನದಿಯಲ್ಲಿ ಗುರುವಾರ ಸಂಭವಿಸಿದ ದೋಣಿ ದುರಂತಕ್ಕೆ ಸಂಬಂಧಿಸಿದಂತೆ ಮತ್ತೆ ಏಳು ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, ಮೃತರ ಸಂಖ್ಯೆ 10ಕ್ಕೇ ಏರಿಕೆಯಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ದುರಂತದಲ್ಲಿ 17 ಜನರು ಕೊಚ್ಚಿಕೊಂಡು ಹೋಗಿರುವ ಸಾಧ್ಯತೆ ಇದೆ.

‘ಶವಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಘಟನೆ ನಡೆದ 15–20 ಕಿ.ಮೀದೂರದಲ್ಲಿ ಶವಗಳು ಪತ್ತೆಯಾಗಿವೆ’ ಎಂದು ಕೃಷ್ಣಾಪುರ ಪೊಲೀಸ್ ಠಾಣೆ ಠಾಣಾಧಿಕಾರಿ ಸಂಜಯ್ ತಿವಾರಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಇದನ್ನೂ ಓದಿ:ದೋಣಿ ದುರಂತ: 32 ಮಂದಿ ನಾಪತ್ತೆ

30ಕ್ಕೂ ಹೆಚ್ಚು ಜನರನ್ನು ಹೊತ್ತ ದೋಣಿಯು ಮಾರ್ಕಾದಿಂದ ಫತೇಪುರ್ ಜಿಲ್ಲೆಯ ಜರೌಲಿ ಘಾಟ್ ಕಡೆಗೆ ಸಾಗುತ್ತಿದ್ದಾಗ ಬಲವಾದ ಗಾಳಿಗೆ ಭಾರಿ ಅಲೆಗಳು ಎದ್ದು ದೋಣಿ ಮಗುಚಿತ್ತು. 13 ಮಂದಿ ಈಜಿ ದಡ ಸೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.