ಗುರುವಾರ , ಆಗಸ್ಟ್ 11, 2022
27 °C

ನಪುಂಸಕತ್ವ ಮುಚ್ಚಿಟ್ಟು ಮದುವೆ: ಗಂಡ ಸೇರಿದಂತೆ 7 ಮಂದಿ ವಿರುದ್ಧ ಎಫ್‌ಐಆರ್‌

ಪಿಟಿಐ Updated:

ಅಕ್ಷರ ಗಾತ್ರ : | |

ಶಹಜಹಾನ್‌ಪುರ: ನಪುಂಸಕತ್ವವನ್ನು ಮುಚ್ಚಿಟ್ಟು ಮದುವೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಪತಿ ಸೇರಿದಂತೆ 7 ಮಂದಿ ವಿರುದ್ಧ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

ಪುವಯಾನ್‌ ಪೊಲೀಸ್‌ ಠಾಣಾ ವ್ಯಪ್ತಿಯ ಗ್ರಾಮವೊಂದರ ಯುವತಿಯು ಶಹಜಹಾನ್‌ಪುರದ ಹುಡುಗನನ್ನು ಮದುವೆಯಾಗಿದ್ದರು. ಸಂಸಾರ ಆರಂಭಿಸಿದ ಬಳಿಕ ಗಂಡನಿಗೆ ನಪುಂಸಕತ್ವವಿರುವುದು ತಿಳಿದುಬಂದಿದೆ. ಈ ಸಂಬಂಧ ತನ್ನನ್ನು ವಂಚಿಸಿ ಮದುವೆ ಮಾಡಿಕೊಳ್ಳಲಾಗಿದೆ ಎಂದು ಯುವತಿ ದೂರು ದಾಖಲಿಸಿದ್ದಾರೆ.

ಗಂಡನ ನಪುಂಸಕತ್ವದ ಬಗ್ಗೆ ಸಂಬಂಧಿಗಳ ಬಳಿ ಹೇಳಿಕೊಂಡಾಗ ತನ್ನ ಮೇಲೆಯೇ ದಾಳಿ ನಡೆಸಿದ್ದರು ಮತ್ತು ಈ ವಿಚಾರವನ್ನು ಹೊರಗೆ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದರು ಎಂದು ಯುವತಿ ದೂರಿದ್ದಾರೆ.

ಯುವತಿಯ ಕುಟುಂಬವು ₹ 10 ಲಕ್ಷ ನಗದು ಸೇರಿದಂತೆ ಮನೆಗೆ ಅಗತ್ಯ ಪೀಠೋಪಕರಣಗಳನ್ನು ಉಡುಗೊರೆ ರೂಪದಲ್ಲಿ ನೀಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು