ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ ಚುನಾವಣೆ ಕರ್ತವ್ಯ: 2,097 ಸರ್ಕಾರಿ ನೌಕರರು ಕೋವಿಡ್‌ನಿಂದ ಸಾವು

Last Updated 13 ಸೆಪ್ಟೆಂಬರ್ 2021, 12:54 IST
ಅಕ್ಷರ ಗಾತ್ರ

ಲಖನೌ: ಏಪ್ರಿಲ್‌ನಲ್ಲಿ ಉತ್ತರ ಪ್ರದೇಶದ ಪಂಚಾಯಿತಿ ಚುನಾವಣೆಗಳಲ್ಲಿ ಕರ್ತವ್ಯ ನಿರತರಾಗಿದ್ದ ಸರ್ಕಾರಿ ನೌಕರರ ಪೈಕಿ 2,097 ಸಿಬ್ಬಂದಿ ಕೋವಿಡ್‌–19 ಸಂಬಂಧಿತ ಕಾರಣಗಳಿಂದ ಮೃತಪಟ್ಟಿದ್ದಾರೆ. ಅವರಲ್ಲಿ ಹೆಚ್ಚಿನವರು ಶಿಕ್ಷಕರು ಎಂಬುದನ್ನು ರಾಜ್ಯ ಸರ್ಕಾರ ಬಹಿರಂಗ ಪಡಿಸಿದೆ.

ಪಂಚಾಯಿತಿಗಳಿಗೆ ಏಪ್ರಿಲ್‌ 15ರಿಂದ 29ರ ವರೆಗೂ ನಾಲ್ಕು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಮೇ 2ರಂದು ಮತ ಎಣಿಕೆ ಕಾರ್ಯ ನಡೆಸಲಾಗಿತ್ತು.

ಕೋವಿಡ್‌ನಿಂದ ಸಾವಿಗೀಡಾದ ಸರ್ಕಾರಿ ನೌಕರರ ಕುರಿತ ವಿವರವನ್ನು ಪಂಚಾಯಿತಿ ರಾಜ್‌ನ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮನೋಜ್‌ ಕುಮಾರ್‌ ಸಿಂಗ್‌ ಅವರು ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿಯೊಂದಿಗೆ ಹಂಚಿಕೊಂಡಿದ್ದಾರೆ. ಮೃತರ ಕುಟುಂಬಗಳಿಗೆ ₹ 30 ಲಕ್ಷ ಪರಿಹಾರವನ್ನು ಶೀಘ್ರವಾಗಿ ತಲುಪಿಸಲು ಪತ್ರದಲ್ಲಿ ತಿಳಿಸಿದ್ದಾರೆ.

ಚುನಾವಣೆ ಕರ್ತವ್ಯದ ವೇಳೆ 2,128 ಸರ್ಕಾರಿ ನೌಕರರು ಸಾವಿಗೀಡಾಗಿದ್ದು, ಅವರಲ್ಲಿ 2,097 ಮಂದಿ ಕೋವಿಡ್‌–19ನಿಂದ ಹಾಗೂ 31 ಜನ ಇತರೆ ಕಾರಣಗಳಿಂದ ಮೃತಪಟ್ಟಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT