ಭಾನುವಾರ, ಫೆಬ್ರವರಿ 28, 2021
21 °C

ಉತ್ತರ ಪ್ರದೇಶ: ವೈದ್ಯಕೀಯ ವಿದ್ಯಾರ್ಥಿ ಅಪಹರಣ, ₹ 70 ಲಕ್ಷ ಹಣಕ್ಕೆ ಬೇಡಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಗೊಂಡಾ (ಯುಪಿ): ಕಿಡಿಗೇಡಿಗಳು ವೈದ್ಯಕೀಯ ವಿದ್ಯಾರ್ಥಿಯನ್ನು ಅಪಹರಿಸಿದ್ದು, ಕುಟುಂಬಸ್ಥರಿಂದ ₹70 ಲಕ್ಷ ಬೇಡಿಕೆ ಇಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಹ್ರೇಚ್ ಜಿಲ್ಲೆಯಲ್ಲಿ ಪಯಾಗ್‌ಪುರ ಪ್ರದೇಶದ ನಿವಾಸಿ ಗೌರವ್‌ ಹಲ್ದಾರ್‌ ಅವರು ಸ್ಥಳೀಯ ಖಾಸಗಿ ಸಂಸ್ಥೆಯೊಂದರಲ್ಲಿ ಬಿಎಎಂಎಸ್‌ (ಬ್ಯಾಚುಲರ್‌ ಇನ್‌ ಆಯುರ್ವೇದ ಆ್ಯಂಡ್‌ ಸರ್ಜರಿ) ಅಧ್ಯಯನ ಮಾಡುತ್ತಿದ್ದು, ಸೋಮವಾರ ಹಾಸ್ಟೆಲ್‌ನಿಂದ ಹೊರಟ ಗೌರವ್ ನಾಪತ್ತೆಯಾಗಿದ್ದಾರೆ ಎಂದು ಎಸ್‌ಪಿ ಶೈಲೇಶ್‌ ಕುಮಾರ್ ಪಾಂಡೆ ತಿಳಿಸಿದ್ದಾರೆ.

ಗೌರವ್‌ ಅವರ ತಂದೆಗೆ ಮಂಗಳವಾರ ಮಧ್ಯಾಹ್ನ ಕರೆ ಮಾಡಿದ್ದ ಅಪಹರಣಕಾರರು, ₹70 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದಿದ್ದರೆ ಮಗನನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಗೌರವ್ ಅಪಹರಣ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು