ಬುಧವಾರ, ಜುಲೈ 28, 2021
27 °C

ಚಾರ್‌ಧಾಮ್‌ ಯಾತ್ರೆ: ಜುಲೈ 1ರಿಂದ ಭಾಗಶಃ ಆರಂಭಕ್ಕೆ ಅನುಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೆಲವು ನಿರ್ಬಂಧಗಳೊಂದಿಗೆ ಜುಲೈ 1ರಿಂದ ಚಾರ್‌ಧಾಮ್‌ ಯಾತ್ರೆಗೆ ಅನುಮತಿ ನೀಡಿರುವುದಾಗಿ ಉತ್ತರಾಖಂಡ ರಾಜ್ಯ ಸರ್ಕಾರ ಭಾನುವಾರ ಹೇಳಿದೆ.

ದೇವಾಲಯಗಳು ಇರುವ ಜಿಲ್ಲೆಗಳ ಜನರು ಆಯಾ ದೇವಸ್ಥಾನಗಳಿಗೆ ಜುಲೈ 1ರಿಂದ ಯಾತ್ರೆ ಕೈಗೊಳ್ಳಲು ಅವಕಾಶ ನೀಡಲಾಗಿದೆ. ಜುಲೈ 11ರಿಂದ ಎಲ್ಲ ಜಿಲ್ಲೆಗಳ ಜನರು ಈ ಯಾತ್ರೆ ಕೈಗೊಳ್ಳಬಹುದು ಎಂದು ಸರ್ಕಾರ ತಿಳಿಸಿದೆ.

ಪ್ರತಿ ವರ್ಷ ಮೇನಲ್ಲಿ ಚಾರ್‌ಧಾಮ್‌ ಯಾತ್ರೆ ಆರಂಭವಾಗುತ್ತದೆ. ಆದರೆ,  ಕೋವಿಡ್‌–19 ಕಾರಣದಿಂದ ಈ ಬಾರಿ ಮೇನಲ್ಲಿ ಈ ಯಾತ್ರೆಯನ್ನು ರದ್ದುಮಾಡಲಾಗಿತ್ತು.

ಬದರಿನಾಥ ದೇಗುಲ ಚಮೋಲಿ ಜಿಲ್ಲೆಯಲ್ಲಿದೆ. ಕೇದಾರನಾಥ ದೇವಸ್ಥಾನ ರುದ್ರಪ್ರಯಾಗದಲ್ಲಿದ್ದರೆ ಗಂಗೋತ್ರಿ ಹಾಗೂ ಯಮುನೋತ್ರಿ ಉತ್ತರಕಾಶಿ ಜಿಲ್ಲೆಯಲ್ಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು