ಶುಕ್ರವಾರ, ಸೆಪ್ಟೆಂಬರ್ 17, 2021
26 °C

ಬಂಗಾಳಿ ಜಾತಿ ಪ್ರಮಾಣಪತ್ರದಿಂದ ‘ಪೂರ್ವ ಪಾಕಿಸ್ತಾನ’ ಪದ ಬಳಕೆ ಕೈ ಬಿಟ್ಟ ಸರ್ಕಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಡೆಹ್ರಾಡೂನ್: ಉತ್ತರಾಖಂಡಕ್ಕೆ ಸ್ಥಳಾಂತರಗೊಂಡಿರುವ ಬಂಗಾಳಿ ಸಮುದಾಯದ ಸದಸ್ಯರಿಗೆ ನೀಡಲಾಗುವ ಜಾತಿ ಪ್ರಮಾಣಪತ್ರದಲ್ಲಿ ‘ಪೂರ್ವ ಪಾಕಿಸ್ತಾನ’ ಎಂಬ ಪದ ಬಳಕೆಯನ್ನು ಕೈಬಿಡುವ ಪ್ರಸ್ತಾವಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ಈ ತಿಂಗಳ ಆರಂಭದಲ್ಲಿ ಮುಖ್ಯಮಂತ್ರಿ ಪುಷ್ಕರ್‌ಸಿಂಗ್ ಧಾಮಿ ಅವರು ಈ ಪ್ರಸ್ತಾವವನ್ನು ಮುಂದಿಟ್ಟಿದ್ದರು.  ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿದೆ.

ಈ ಮೂಲಕ ಉದ್ಧಮ್‌ ಸಿಂಗ್‌ ನಗರ ಜಿಲ್ಲೆಯಲ್ಲಿ ನೆಲೆಸಿರುವ ಬಂಗಾಳಿ ಸಮುದಾಯದವರ ದೀರ್ಘ ಕಾಲದ ಬೇಡಿಕೆಯನ್ನು ಈಡೇರಿಸಲಾಗಿದೆ.

ಸಿತಾರಗಂಜ್‌ನ ಶಾಸಕ ಸೌರಬ್‌ ಬಹುಗುಣ, ಸಚಿವ ಅರವಿಂದ ಪಾಂಡೆ ಮತ್ತು ಬಂಗಾಳಿ ಮಹಾಸಭಾದ ಸದಸ್ಯರು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ, ಧನ್ಯವಾದ ತಿಳಿಸಿದರು.

ಜಾತಿ ಪ್ರಮಾಣಪತ್ರದಿಂದ ಪೂರ್ವ ಪಾಕಿಸ್ತಾನ ಪದ ಬಳಕೆಯನ್ನು ತೆಗೆಯುವಂತೆ ಸಿತಾರಗಂಜ್‌ನ ಶಾಸಕ ಸೌರಬ್‌ ಬಹುಗುಣ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು