ಶುಕ್ರವಾರ, ಜನವರಿ 22, 2021
27 °C

ನಟಿ ವಿಜಯಶಾಂತಿ ಶೀಘ್ರ ಬಿಜೆಪಿಗೆ

ಪಿಟಿಐ Updated:

ಅಕ್ಷರ ಗಾತ್ರ : | |

Vijayashanti

ಹೈದರಾಬಾದ್‌: ಕಾಂಗ್ರೆಸ್‌ನ ಹಿರಿಯ ನಾಯಕಿ, ನಟಿ ವಿಜಯಶಾಂತಿ ಅವರು ಶೀಘ್ರದಲ್ಲಿಯೇ ಬಿಜೆಪಿಗೆ ಸೇರಲಿದ್ದಾರೆ ಎಂದು ಮೂಲಗಳು ಸೋಮವಾರ ತಿಳಿಸಿವೆ. ಮಾಜಿ ಸಂಸದೆಯೂ ಆದ ಅವರು ಕೆಲ ದಿನಗಳಿಂದ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿಲ್ಲ.

ಒಂದು ವೇಳೆ ಅವರು ಬಿಜೆಪಿಗೆ ಸೇರ್ಪಡೆಯಾದ್ದಲ್ಲಿ, ಖುಷ್ಬೂ ಬಳಿಕ ಬಿಜೆಪಿಗೆ ಸೇರಿದ ದಕ್ಷಿಣದ ಎರಡನೇ ನಟಿ  ಎನಿಸಿಕೊಳ್ಳುತ್ತಾರೆ. ನಟಿ ಖುಷ್ಬೂ ಅವರೂ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು.

ಡಿಸೆಂಬರ್‌ 1ರಂದು ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆಗೆ (ಜಿಎಚ್‌ಎಂಸಿ) ಚುನಾವಣೆ ನಡೆಯಲಿದ್ದು, ನಟಿಯ ಸೇರ್ಪಡೆ ಬಿಜೆಪಿಗೆ ಬಲ ನೀಡಲಿದೆ ಎನ್ನಲಾಗಿದೆ.

ವಿಜಯಶಾಂತಿ ಅವರು ದೆಹಲಿಗೆ ತೆರಳಿ, ಅಲ್ಲಿ ಅಲ್ಲಿ ಅಮಿತ್‌ ಶಾ ಸಮ್ಮುಖದಲ್ಲಿ ಪಕ್ಷ ಸೇರುವರು ಎಂದು ಮೂಲಗಳು ತಿಳಿಸಿವೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು